Wednesday, September 23, 2026
Homeಹೆಬ್ರಿಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

ಮುನಿಯಾಲು : ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಜಿ.ಎಸ್.ಬಿ. ಮಹಿಳಾ ಮಂಡಳಿಯ ವತಿಯಿಂದ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಹಾಗೂ ಸಾಮೂಹಿಕ ಚೂಡಿ ಪೂಜಾ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು.

ದೇವರ ಪ್ರಾರ್ಥನೆ ಬಳಿಕ ಗಂಗೆ ಪೂಜೆ, ಸಾಮೂಹಿಕ ಚೂಡಿ ಪೂಜೆ ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ಸಲ್ಲಿಸಿ, ಬಳಿಕ ಭೂರಿ ಸಮಾರಾಧನೆ ನೆರವೇರಿತು.

ಮಹಿಳಾ ಮಂಡಳಿಯ ಅಧ್ಯಕ್ಷೆ ನಮಿತಾ ನರಸಿಂಹ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಉಪಾಧ್ಯಕ್ಷೆ ಮಂಗಳ ಯಶವಂತ ನಾಯಕ್, ಕೋಶಾಧಿಕಾರಿ ಮಹಾಲಸಾ ಕೃಷ್ಣಕಾಂತ ನಾಯಕ್ ಹಾಗೂ ಕಾರ್ಯದರ್ಶಿ ರಜನಿ ರಾಮ ಪೈ ಸೇರಿದಂತೆ ಮಹಿಳಾ ಮಂಡಳಿಯ ಸರ್ವ ಸದಸ್ಯರು, ಮುಕ್ತೇಸರರು, ಆಡಳಿತ ಮೊಕ್ತೇಸರರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ವಾಮನ ಭಟ್ ಹಾಗೂ ಅರ್ಚಕ ವೃಂದದವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ವರಮಹಾಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!