ಹೆಬ್ರಿ : ಹೆಬ್ರಿಯ ಕನ್ಯಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹೆಬ್ರಿ ವೃತ್ತ ಮಟ್ಟದ 14ರ ವಯೋಮಾನದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ ನೆರವೇರಿತು .
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ದೇವಾಡಿಗ ವಹಿಸಿದ್ದರು. ಪಂದ್ಯಾಟದ ಉದ್ಘಾಟನೆಯನ್ನು ಶಾಲೆಯ ಹಿರಿಯ ವಿದ್ಯಾರ್ಥಿ, ಶಾಲೆಯ ಪ್ರಧಾನ ದಾನಿ ಕೋಮಲ್ ಫೀಡ್ಸ್ ಕನ್ಯಾನ ಮಾಲಕ ಸಿಧ್ದಿಪ್ರಸಾದ್ ಶೆಣೈ ಉದ್ಘಾಟಿಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಾರ್ಕಳ ತಾಲ್ಲೂಕು ಅಧ್ಯಕ್ಷ ರಮಾನಂದ ಶೆಟ್ಟಿ , ಕ್ಲಸ್ಟರ್ ಸಿ.ಆರ್ ಪಿ ಪ್ರಿತೇಶ್ ಕುಮಾರ್ ಶೆಟ್ಟಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪೂರ್ವಾಧ್ಯಕ್ಷ ಹರೀಶ್ ಪೂಜಾರಿ, GPT ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ, ಮುಖ್ಯ ಶಿಕ್ಷಕಿ ಶ್ವೇತಾ ಉಪಸ್ಥಿತರಿದ್ದರು.
ಶಾಲೆಯ ಪ್ರಧಾನ ದಾನಿ ಸಿಧ್ದಿಪ್ರಸಾದ್ ಶೆಣೈ ಅವರನ್ನು ಅಭಿನಂದಿಸಲಾಯಿತು. 15 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು. ಸಮಾರೋಪ ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿ ಕೊಡುಗೈ ದಾನಿ ಬಾಲಕೃಷ್ಣ ಪೂಜಾರಿ ಸಂಕ್ರಮಕ್ಕಿ ಕನ್ಯಾನ ಮುಂದಾಳತ್ವದಲ್ಲಿ ವಿಶಿಷ್ಟ ಬಹುಮಾನ ವಿತರಣೆ ನಡೆಯಿತು.
ಶಾಲಾ ಉತ್ಸಾಹಿ ಯುವ ಹಿರಿಯ ವಿದ್ಯಾರ್ಥಿಗಳ ತಂಡ ಅರುಣ್ ಕುಮಾರ್ ಶೆಟ್ಟಿ ಮತ್ತು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ದೇವಾಡಿಗ ಹಾಗೂ ಸದಸ್ಯರು ಮತ್ತು ಶಿಕ್ಷಕರ ನೇತೃತ್ವದ ಪರಿಶ್ರಮ ಸಹಕಾರದಲ್ಲಿ ಪಂದ್ಯಾಟ ನಡೆಯಿತು.




