ಗಣಹೋಮದೊಂದಿಗೆ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು. ವಿಶೇಷವಾಗಿ ಅನಂತ ಪದ್ಮನಾಭ ಸನ್ನಿಧಿಯಲ್ಲಿ ‘ಸಾವಿರ ಕದಳಿ ಅರ್ಚನೆ’ ಸೇವೆಯನ್ನು ಭಕ್ತಿಯಿಂದ ನೆರವೇರಿಸಲಾಯಿತು. ಭಜನಾ ಕಾರ್ಯಕ್ರಮ : ಗುರು ಮಂದಿರದಲ್ಲಿ ‘ಮಹಾಮಹೇಶ್ವರ ಭಜನಾ ಮಂಡಳಿ’ಯವರಿಂದ ಶ್ರದ್ಧಾಭಕ್ತಿಯ ಭಜನಾ ಸಂಕೀರ್ತನೆ ನಡೆಯಿತು.
ಉಮೇಶ್ ಪೂಜಾರಿ ಸುನ್ನಂಗಿ ಅವರ ವೈದಿಕತ್ವದಲ್ಲಿ ಮಹಾ ಗುರುಪೂಜೆಯು ವಿಜೃಂಭಣೆಯಿಂದ ನೆರವೇರಿತು.
ಪೂಜಾ ಕಾರ್ಯಕ್ರಮಗಳ ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.



