Wednesday, September 23, 2026
Homeಶಿವಪುರ ಗ್ರಾಮ ಪಂಚಾಯತ್‌ಶಿವಪುರದಲ್ಲಿ ಶ್ರೀ ರಾಯರ ಆರಾಧನಾ ಮಹೋತ್ಸವ.

ಶಿವಪುರದಲ್ಲಿ ಶ್ರೀ ರಾಯರ ಆರಾಧನಾ ಮಹೋತ್ಸವ.

ಶಿವಪುರ : ಶಿವಪುರ ಪಾಂಡುಕಲ್ಲು ಬಡ್ಕಿಲ್ಲಾಯ ಮನೆತನದ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 52ನೇ ಆರಾಧನಾ ಮಹೋತ್ಸವವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಿಧ್ಯುಕ್ತವಾಗಿ ಪಾಂಡುಕಲ್ಲು ಪಟ್ಟಾಭಿ ನಿಲಯದಲ್ಲಿ ಭಾನುವಾರ ನಡೆಯಿತು.
ವೇದಮೂರ್ತಿ ಬ್ರಹ್ಮಶ್ರೀ ಪಾಂಡು ಕಲ್ಲು ನರಸಿಂಹ ಭಟ್ಟರ ಆಚಾರ್ಯತ್ವದಲ್ಲಿ ಧಾರ್ಮಿಕ
ಕಾರ್ಯಕ್ರಮಗಳು ನಡೆದವು.

ಮಧ್ಯಾಹ್ನ ಅನ್ನಪ್ರಸಾದ ವಿನಿಯೋಗದ ಬಳಿಕ ಶ್ರೀ ರಾಯರ ಭಕ್ತವೃಂದದವರಿಂದ ಭಜನೆ ನಡೆಯಿತು. ಹರಿದಾಸ ಬಡ್ಕಿಲ್ಲಾಯ ಚಂದ್ರಶೇಖರ ರಾಯರು ” ಸತ್ಯ ಧರ್ಮ.ಋತ‌ ” ವಿಷಯದ ವಿಶೇಷ ಉಪನ್ಯಾಸ ನೀಡಿದರು. ಸಮಿತಿಯ ಗೌರವಾಧ್ಯಕ್ಷೆಬಡ್ಕಿಲ್ಲಾಯ ಲಲಿತಾ ರಾವ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ಬಡ್ಕಿಲ್ಲಾಯ ಸುಶೀಲಾ ಆರ್‌.ರಾವ್ ಉಪಸ್ಥಿತರಿದ್ದರು.

ಸಮಿತಿಯ ಸದಸ್ಯರಾದ ಬಡ್ಕಿಲ್ಲಾಯ ವಸಂತ ರಾವ್, ಬಡ್ಕಿಲ್ಲಾಯ ರವೀಂದ್ರ ರಾವ್, ಬಡ್ಕಿಲ್ಲಾಯ
ಆದರ್ಶ ರಾವ್.ಬಡ್ಕಿಲ್ಲಾಯ ಶಿವಪ್ರಸಾದ ರಾವ್ ವಿವಿಧ ವಿಭಾಗಗಳ ಉಸ್ತುವಾರಿ ವಹಿಸಿ
ಸಹಕರಿಸಿದ್ದರು.

ಆರಾಧನೆಯ ಪ್ರಧಾನ ವ್ಯವಸ್ಥಾಪಕ ಡಾ.ಬಡ್ಕಿಲ್ಲಾಯ ರಾಘವೇಂದ್ರ ರಾವ್ ಸ್ವಾಗತಿಸಿದರು.
ಸಹವ್ಯವಸ್ಥಾಪಕಿ ಡಾ.ಬಡ್ಕಿಲ್ಲಾಯ ಪ್ರತಿಮಾ.ಆರ್.ರಾವ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!