Wednesday, September 23, 2026
Homeಕಾರ್ಕಳಕಸ್ತೂರಿ ರಂಗನ್ ವರದಿ: ಬುಡಕಟ್ಟು ಜನಾಂಗಗಳು - ಅರಣ್ಯವಾಸಿಗಳ ಮೂಲಭೂತ ಹಕ್ಕುಗಳ ಸಂರಕ್ಷಿಸುವ ಕಾನೂನು ಆಗಿದ್ದು...

ಕಸ್ತೂರಿ ರಂಗನ್ ವರದಿ: ಬುಡಕಟ್ಟು ಜನಾಂಗಗಳು – ಅರಣ್ಯವಾಸಿಗಳ ಮೂಲಭೂತ ಹಕ್ಕುಗಳ ಸಂರಕ್ಷಿಸುವ ಕಾನೂನು ಆಗಿದ್ದು , ಅದಕ್ಕೆ ಯಾವುದೇ ರೀತಿಯ ದಕ್ಕೆ ಆಗಬಾರದು – ಗಂಗಾಧರ ಗೌಡ.

ಕಾರ್ಕಳ : ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ವಲಯ ಮತ್ತು ಪ್ರದೇಶ ಕರಡು ಅಧಿಸೂಚನೆ ಹೊರಡಿಸಿದರ ಕುರಿತಾಗಿ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಮಾನ್ಯ ಶಾಸಕರು, ನಿಗಮಗಳ ಅಧ್ಯಕ್ಷರುಗಳ ಸಮ್ಮುಖದಲ್ಲಿ ವಿಶೇಷ ಸಭೆ ಆಗಸ್ಟ್ 31ರಂದು ಮಾನ್ಯ ಜಿಲ್ಲಾಧಿಕಾರಿಯವರ ಕೋರ್ಟ್ ಸಭಾಂಗಣದಲ್ಲಿ ಜರಗಿತು.

ಈ ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಇವರು ಮಾತನಾಡಿ, ಕರಡು ಅಧಿಸೂಚನೆಯಲ್ಲಿ ಅರಣ್ಯ ಹಕ್ಕು ಕಾಯ್ದೆ -2006 ಕಾಯ್ದೆಯಡಿ, ಬುಡಕಟ್ಟು ಜನಾಂಗಗಳು ಹಾಗೂ ಅರಣ್ಯವಾಸಿಗಳ ಮೂಲಭೂತ ಹಕ್ಕುಗಳ ಸಂರಕ್ಷಿಸುವ ಕಾನೂನು ಆಗಿದ್ದು , ಅದಕ್ಕೆ ಯಾವುದೇ ರೀತಿಯ ದಕ್ಕೆ ಆಗಬಾರದು ಎಂದು ಅದರ ಕುರಿತು ಸ್ಪಷ್ಟಿಕರಣ ನೀಡುವಂತೆ ಕೋರಿದರು ಹಾಗೂ ಈ ಬಗ್ಗೆ ಕಾರ್ಕಳ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ರವರನ್ನು ವಿಶೇಷ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಒತ್ತಾಯಿಸಿದರು. ಸದರಿ ಪ್ರಶ್ನೆಗೆ ಅರಣ್ಯ ಹಕ್ಕು ಕಾಯ್ದೆಗೆ ಯಾವುದೇ ರೀತಿಯ ತೊಂದರೆ ಇಲ್ಲ ಅನ್ನುವ ಮೌಖಿಕ ಉತ್ತರ ದೊರೆಯಿತು.

ಮಲೆಕುಡಿಯ ಸಂಘದ ನಿಯೋಗದಲ್ಲಿ ಪ್ರಧಾನ ಕಾರ್ಯದರ್ಶಿ ಅಶೋಕ ಕೆರ್ವಾಶೆ, ವಕ್ತಾರ ದಿನೇಶ್ ನೂರಾಳ್ ಬೆಟ್ಟು, ಮಾಜಿ ಜಿಲ್ಲಾಧ್ಯಕ್ಷ ಸುಧಾಕರ ಗೌಡ ನಾಡ್ಪಾಲು, ಸದಾಶಿವ ನಾಡ್ಪಾಲು, ಸಂತೋಷ್ ಈದು, ಶೇಖರ ಗೌಡ ಕೂಡ್ಲು, ಸುಕೇಶ್ ಗೌಡ ಈದು, ಸುರೇಶ್ ಕೂಡ್ಲು, ಪ್ರಸಾದ್ ನಾಡ್ಪಾಲು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!