ಕುಂದಾಪುರ : ಖಿಧ್ಮಾ ಫೌಂಡೇಶನ್ ಬೈಂದೂರು ಹಾಗೂ ಕುಂದಾಪುರ ತಾಲೂಕು ವತಿಯಿಂದ ಮಾವಿನಕಟ್ಟೆಯಲ್ಲಿ ಮನೆ ಹಸ್ತಾಂತರ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಎನ್ ಎಸ್ ಅಕಾಡೆಮಿ ಹಾಗೂ ಕಮ್ಯೂನಿಟಿ ಸೆಂಟರ್ ಕಾರ್ಕಳ ಇದರ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಖಿಧ್ಮಾ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ರಫಿಕ್ ವಂಡ್ಸೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಅಲ್ ಬದ್ರಿಯಾ ಜುಮ್ಮಾ ಮಸೀದಿ ಮಾವಿನಕಟ್ಟೆ ಅಧ್ಯಕ್ಷ ಜಿ. ಎಮ್ ಚೇರಿಯಬ್ಬ ಸಾಹೇಬ್, ಮಾವಿನಕಟ್ಟೆ ಮಹ್ರೂಫ್ ಜುಮ್ಮಾ ಮಸೀದಿಯ ಅಧ್ಯಕ್ಷ ಮನ್ಸೂರ್ ಸಾಹೇಬ್, ಖಿಧ್ಮಾ ಫೌಂಡೇಶನ್ ಉಪಾಧ್ಯಕ್ಷ ಹ್ಯಾರಿಸ್ ಗೋಳಿಹೊಳೆ , ಖಿಧ್ಮಾ ಫೌಂಡೇಶನ್ ಸೌದಿ ಅರೇಬಿಯಾ ರಿಯಾದ್ ಘಟಕ ಅಧ್ಯಕ್ಷ ಫಜಲು ರೆಹಮಾನ್ ಗಂಗೊಳ್ಳಿ ಮಾಜಿ ಅಧ್ಯಕ್ಷ ಶೇಖ್ ಅಬು ಮೊಹಮ್ಮದ್ , ಬೇದ್ರೆ ಇಬ್ರಾಹಿಂ , ಟೀಮ್ ಮಲೆನಾಡು ಹ್ಯೂಮೇನಿಟರಿಯನ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಶುಕುರ್ ಬೆಳ್ವೆ , ಕೋಶಾಧಿಕಾರಿ. ಮೊಹಮ್ಮದ್ ಆಸೀಫ್ ಉಪಸ್ತಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಅಬು ಮೊಹಮ್ಮದ್ ಕುಂದಾಪುರ ಸ್ವಾಗತಿಸಿದರು. ಕಾರ್ಯದರ್ಶಿ ಅಸ್ಲಾಂ ತಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಅಶ್ರಫ್ ನಾಗೂರು ವಂದಿಸಿದರು.




