ಮುಂಬಯಿ : ಐಸಿಎಸ್‌ಇ ಪರೀಕ್ಷೆಯಲ್ಲಿ 9೦ % ಕ್ಕಿಂತಲೂ ಅತ್ಯಧಿಕ ಅಂಕ ಪಡೆದು ವಿಶೇಷ ಶೈಕ್ಷಣಿಕ ಸಾಧನೆ ಮಾಡಿದ ಪಡುಕುಡೂರು ಮತ್ತಾವು ಮನೆ ಅರುಣ್ ಎಸ್ ಶೆಟ್ಟಿ ದಂಪತಿಗಳ ಪುತ್ರ ಆರ್ಯನ್ ಅರುಣ್ ಶೆಟ್ಟಿ ಅವರ ಸಾಧನೆಗೆ ಮುಂಬಯಿ ಬಂಟರ ಸಂಘ ಡೊಂಬಿವಿಲಿ ರೀಜನ್ ವತಿಯಿಂದ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಪಡುಕುಡೂರು ಅರುಣ್ ಎಸ್ ಶೆಟ್ಟಿ ಮುಂಬಯಿ, ಯುವ ಉದ್ಯಮಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ಮುಂಬಯಿ, ಮುಂಬಯಿ ಬಂಟರ ಸಂಘದ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.




