ಮುನಿಯಾಲು : ಮುನಿಯಾಲು ಲಯನ್ಸ್ ಕ್ಲಬ್ಬಿನ 2026-27 ನೇ ಸಾಲಿನ ಅಧ್ಯಕ್ಷ ಅಶೋಕ್ ಕುಮಾರ್ ದೊಂಡೆರಂಗಡಿ ಮತ್ತವರ ತಂಡದ ಪದಗ್ರಹಣ ಸಮಾರಂಭ ಮುನಿಯಾಲು ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಿತು.
ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಜಿಲ್ಲೆ. 317. C ಯ ಜಿಲ್ಲಾ ಸಂಯೋಜಕ ಹೃಷಿಕೇಶ್ ಹೆಗ್ಡೆ ಪದಗ್ರಹಣವನ್ನು ನೆರವೇರಿಸಿದರು, ವೈದ್ಯಕೀಯ ವೆಚ್ಚಕ್ಕಾಗಿ ಒಬ್ಬರಿಗೆ ಆರ್ಥಿಕ ಧನ ಸಹಾಯ, ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿನಿಗೆ ಆರ್ಥಿಕ ಸಹಾಯ ನೀಡಲಾಯಿತು.
ಲಯನ್ಸ್ , ಪ್ರಾಂತೀಯ ಅಧಿಕಾರಿ ಥೋಮುಸ್ ಲೂಕಾಸ್, ವಲಯ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಪ್ರಾಂತೀಯ ಕಾರ್ಯದರ್ಶಿ ದಿನೇಶ್ ಕುಮಾರ್, ಮುನಿಯಾಲು ಲಯನ್ಸ್ ಕ್ಲಬ್ಬಿನ ಸಮಾಜ ಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.
ನೂತನ ಲಯನ್ಸ್ ಅಧ್ಯಕ್ಷ ಅಶೋಕ್ ಕಮಾರ್ ದೊಂಡೆರಂಗಡಿ ಮುನಿಯಾಲು ಲಯನ್ಸ್ ಕ್ಲಬ್ಬಿನ ಎಲ್ಲಾ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುವುದಾಗಿ ಹೇಳಿದರು
, ನಿರ್ಗಮನ ಅಧ್ಯಕ್ಷ ಸಂದೇಶ್ ಶೆಟ್ಟಿ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಭೆಯಲ್ಲಿ ಪ್ರಾಂತ್ಯ ದ ಲಯನ್ಸ್ ಪದಾಧಿಕಾರಿಗಳು,ವಿವಿಧ ಕ್ಲಬ್ಬಿನ ಸದಸ್ಯರು, ಮುನಿಯಾಲು ಕ್ಲಬ್ಬಿನ ಸರ್ವ ಸದಸ್ಯರು, ಜಿಲ್ಲಾ ಕ್ಯಾಬಿನೆಟ್ ಸದಸ್ಯ ಹರ್ಷ ಶೆಟ್ಟಿ, ಶಂಕರ್ ಶೆಟ್ಟಿ, ಟಿ. ಜಿ. ಆಚಾರ್ಯ, ಬೇಳಂಜೆ ಹರೀಶ್ ಪೂಜಾರಿ, ಕೋಶಾಧಿಕಾರಿ ಅಶೋಕ್. ಎಂ. ಶೆಟ್ಟಿ, ಭುಜಂಗ ಶೆಟ್ಟಿ, ಸೀತಾರಾಮ್ ಕಡಂಬ, ಮಂಜುನಾಥ್, ನಯನ ಜೋಗಿ, ಮಂಜುನಾಥ ಕೆ, ಡಾ. ಸುಧರ್ಶನ್ ಹೆಬ್ಬಾರ್, ಸಂಪತ್ ಕುಮಾರ್ , ಹರೀಶ್ ದುಗ್ಗನ್ ಬೆಟ್ಟು, ನೂತನವಾಗಿ ಸೇರ್ಪಡೆ ಗೊಂಡ ರಾಘವ ಕುಕ್ಕುಜೆ, ಉಡುಪಿ ಫೋಟೋ ಗ್ರಾಫರ್ ಸಂಘದ ಅಧ್ಯಕ್ಷ ದಿವಾಕರ್ ಹಿರಿಯಡ್ಕ, ಕಾರ್ಕಳ ಫೋಟೋ ಗ್ರಾಫರ್ ಸಂಘದ ಅಧ್ಯಕ್ಷ ಮುನಿಯಾಲು ಪ್ರಮೋದ್ ಚಂದ್ರ ಪೈ ಉಪಸ್ಥಿತರಿದ್ದರು.
ಶಂಕರ್ ಶೆಟ್ಟಿ ನಿರೂಪಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋಪಿನಾಥ್ ಭಟ್ ಸ್ವಾಗತಿಸಿ ವಂದಿಸಿದರು.




