Wednesday, September 23, 2026
Homeಕಾರ್ಕಳಜಾರ್ಕಳ-ಮುಂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: "ಗುರು ಚರಣಕೆ ನಮನ - ಶೈಕ್ಷಣಿಕ ಸಂವಾದ"

ಜಾರ್ಕಳ-ಮುಂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: “ಗುರು ಚರಣಕೆ ನಮನ – ಶೈಕ್ಷಣಿಕ ಸಂವಾದ”

ಜಾರ್ಕಳ : ಜಾರ್ಕಳ-ಮುಂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುಚರಣಕೆ ನಮನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಶಾಲಾಭಿವೃದ್ದಿ‌ ಸಮಿತಿ ಅಧ್ಯಕ್ಷ ಅಶೋಕ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕಮಲಾಕ್ಷ ಕಾಮತ್ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪೋಷಕರು- ಹಳೆವಿದ್ಯಾರ್ಥಿಗಳು ಸಕ್ರೀಯರಾಗುವಂತೆ ತಿಳಿಸಿ ಮಕ್ಕಳಿಗೆ ಮೌಲ್ಯಗಳನ್ನು ಬೆಳೆಸುವಂತೆ ಪೋಷಕರಿಗೆ ತಿಳಿಸಿದರು.

ಶಾಲಾ‌ ಪರಿಸರವನ್ನು ಗಮನಿಸಿದ ಅವರು ಮೆಚ್ಚುಗೆ ವ್ಯಕ್ತಪಡಿಸಿ ಮತ್ತೊಮ್ಮೆ ಶಾಲೆಗೆ ಭೇಟಿ ನೀಡುವುದಾಗಿ ತಿಳಿಸಿದರು.

ಶಿಕ್ಷಕರಿಗೆ ಗೌರವಾರ್ಪಣೆ:
ಶಾಲೆಯಲ್ಲಿ ಸುಮಾರು 13 ವರ್ಷಗಳ ಕಾಲ ಸೇವೆ ಸಲ್ಲಿಸಿದ‌ 86ರ ಹರೆಯದ ಶಂಕರ್ ಡೋಂಗ್ರೆ ಅವರನ್ನು ಗೌರವಿಸಲಾಯಿತು. ಶಂಕರ್ ಡೋಂಗ್ರೆ ಅವರ ಶಿಷ್ಯವರ್ಗ ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಅತ್ಯುತ್ತಮ ಸಾಧಕ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀಕಾಂತ್ ಭಟ್,ಶಾಲಾ ಶಿಕ್ಷಕರು,
ಅಂಗನವಾಡಿ ಕಾರ್ಯಕರ್ತೆಯರು,ಅಕ್ಷರದಾಸೋಹ ಸಹಾಯಕಿಯರು, ಅಂಗನವಾಡಿ ಸಹಾಯಕಿಯರು ಹಾಗು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಶಾಲಾ ಶಿಕ್ಷಕರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಕಮಲಾಕ್ಷ ಕಾಮತ್ ಅವರಿಗೆ ಅಭಿನಂದನೆ:
ಸರಕಾರಿ ಶಾಲೆಗಳ ಸಬಲೀಕರಣದಲ್ಲಿ ಸಹಕಾರ‌ ನೀಡಿ ಗ್ರಾಮೀಣ ಪ್ರದೇಶದ ಶಾಲೆಗಳ ಉಳಿವಿನಲ್ಲಿ‌ ಪ್ರಮುಖ ಸಹಕಾರ ನೀಡುತ್ತಿರುವ ಕೆ.ಕಮಲಾಕ್ಷ ಕಾಮತ್ ಅವರನ್ನು ಶಾಲಾ ಪರವಾಗಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕ ಜಗದೀಶ್ ಹೆಗ್ಡೆ ಕಾರ್ಕಳ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಸವಿತಾ ಲಕ್ಷ್ಮಣ್,ಸಂಪತ್‌ ಕುಮಾರ್ ಹೆಗ್ಡೆ, ರಘುರಾಮ ಶೆಟ್ಟಿ,ಸಂಜೀವ ಶೆಟ್ಟಿ,ರತ್ನಮ್ಮ ಎಸ್.ಬಿ ಉಪಸ್ಥಿತರಿದ್ದರು..

ಶಾಲಾ ಮುಖ್ಯ ಶಿಕ್ಷಕರು ಸ್ವಾಗತಿಸಿ,ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಜಾತ ವಂದಿಸಿದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಜ್ವಲ್ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು,
ಶಾಲಾಭಿವೃದ್ದಿ‌ ಸಮಿತಿ ಸದಸ್ಯರು,ಶಾಲಾ ಶಿಕ್ಷಕರು ಹಳೆ ವಿದ್ಯಾರ್ಥಿಗಳು ಸಹಕರಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!