ಬಿಲ್ಲವರು ಸಮಾಜ ಎಲ್ಲಾ ಕ್ಷೇತ್ರದಲ್ಲೂ ಸಕ್ರೀಯವಾಗಬೇಕು : ಮುದ್ರಾಡಿ ಮಂಜುನಾಥ ಪೂಜಾರಿ.
ಮುನಿಯಾಲು : ನಮ್ಮ ಬಿಲ್ಲವ ಸಮುದಾಯದ ಯುವಕರು ಭವಿಷ್ಯದ ದಿನಗಳಲ್ಲಿ ಮುಖ್ಯವಾಹಿನಿಗೆ ಬರಬೇಕು, ಸಾಮಾಜಿಕ, ರಾಜಕೀಯ ಮತ್ತು ಉದ್ಯಮ ರಂಗದಲ್ಲಿ ಸಕ್ರೀಯವಾಗಬೇಕು. ಸರ್ಕಾರದ ವಿವಿಧ ಅವಕಾಶವನ್ನು ಸವಲತ್ತುಗಳನ್ನು ಪಡೆದು ಮುಂದೆ ಬರಬೇಕು. ನಮ್ಮ ಸಮಾಜದ ಸೇವೆ ಮಾಡಿದ್ದರಿಂದ ಇಂದು ನನಗೆ ರಾಜ್ಯದ ನಮ್ಮ ಜನರ ಸೇವೆ ಮಾಡುವ ಅವಕಾಶ ನನಗೆ ಲಭಿಸಿದೆ. ಸಮಾಜದ ಜೊತೆಗೆ ನಿರಂತರವಾಗಿ ಇರುತ್ತೇನೆ. ಸಮಾಜಕ್ಕೆ ಇನ್ನಷ್ಟು ಶಕ್ತಿ ತುಂಬವ ಕೆಲಸವನ್ನು ಮಾಡಬೇಕಿದೆ ಎಂದು ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು. ಅವರು ಭಾನುವಾರ ಮುನಿಯಾಲು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಮಾತಿಬೆಟ್ಟು ಶ್ರೀ ಗುರುನಾರಾಯಣ ಸ್ವಾಮಿ ಸಮುದಾಯ ಭವನದಲ್ಲಿ ಶ್ರೀ ಗುರು ನಾರಾಯಣ ಸ್ವಾಮೀಜಿಯವರ 172ನೇ ಜನ್ಮ ದಿನೋತ್ಸವದ ಅಂಗವಾಗಿ ನಡೆದ ಗುರು ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ನಾವು ಸಂಭ್ರಮದಲ್ಲಿ ಖುಷಿ ಪಡುತ್ತೇವೆ, ಆ ಸಂಭ್ರಮ ನಿರಂತರವಾಗಿ ನಮ್ಮ ಜೀವನದಲ್ಲಿ ಇರಬೇಕು, ಸರಳ ಜೀವನದ ಮೂಲಕ ಶಕ್ತಿಯುತವಾಗಿ ಸಮಾಜ ಎಲ್ಲರೂ ಬೆಳೆಯಬೇಕು, ವಿಧ್ಯೆಯಿಂದ ಬಲಯುತರಾಗಬೇಕು, ಅತ್ಯುತ್ತಮ ವಿಧ್ಯೆಯನ್ನು ಪಡೆದು ಉದ್ಯೋಗ, ಉದ್ಯಮ ಮಾಡಬೇಕು, ಕುಟುಂಬ ಮತ್ತು ಸಮಾಜವನ್ನು ಪ್ರೀತಿಸಿ ಎಂದು ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು. ಗುರು ಮಂದಿರದ ಅರ್ಚಕ ಹಿರಿಯರಾದ ಎಂ ಆನಂದ ಪೂಜಾರಿ ಕಾಡುಹೊಳೆ ಗುರು ಪೂಜೆಯನ್ನು ನೆರವೇರಿಸಿದರು.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಟಿ ಮಂಜುನಾಥ್ ವಹಿಸಿದ್ದರು. ಮುನಿಯಾಲು ಶ್ರೀ ಮಾರಿಯಮ್ಮ ದೇವಸ್ಥಾನ ಮುನಿಯಾಲಿನ ಅನುವಂಶಿಕ ಆಡಳಿತ ಮೊಕ್ತೇಸರ ದಿವಾಕರ ವೈ ಶೆಟ್ಟಿ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಕಾರ್ಕಳದ ಅಧ್ಯಕ್ಷ ಪ್ರಮಲ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ಯೋಜನಾಧಿಕಾರಿ ರೇಷ್ಮಾ, ಡಾ.ಸುರೇಶ ಪೂಜಾರಿ ಕಪಿಲಾ, ಸ್ಥಾಪಕ ಅಧ್ಯಕ್ಷ ಎಂ ಆನಂದ ಪೂಜಾರಿ ಮಾತನಾಡಿದರು. ಗೌರವಾಧ್ಯಕ್ಷ ಎಸ್ ಟಿ ಕುಂದರ್, ಯಶೋಧ ಕುಂದರ್, ಉಪಾಧ್ಯಕ್ಷರಾದ ಕೆ ಮಂಜುನಾಥ, ಹರೀಶ್ ಪೂಜಾರಿ, ಕೋಶಾಧಿಕಾರಿ ರಾಜು ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಹರೀಶ, ಕಾರ್ಯದರ್ಶಿ ರೇಖಾ ಸತೀಶ , ಕಟ್ಟಡ ಸಮಿತಿಯ ಅಧ್ಯಕ್ಷ ಕಂಠೆಬೆಟ್ಟು ಸಂಜೀವ ಪೂಜಾರಿ ಉಪಸ್ಥಿತರಿದ್ದರು. ಮುನಿಯಾಲು ಶ್ರೀ ಮಾರಿಯಮ್ಮ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ದಿವಾಕರ ವೈ ಶೆಟ್ಟಿ, ಲಯನ್ಸ್ ಕ್ಲಬ್ ಮುನಿಯಾಲು ಅಧ್ಯಕ್ಷ ಅಶೋಕ ಕುಮಾರ್ ಕರ್ಕೇರಾ, ಪ್ರಗತಿಪರ ಕೃಷಿಕ ಚೆಲುವಯ್ಯ ಪೂಜಾರಿ ವರಂಗ, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಉಪಾಧ್ಯಕ್ಷ ಸುರೇಂದ್ರ ಬೋಂಟ್ರ, ಯುವ ಕೃಷಿಕ ತಿಮ್ಮೊಟ್ಟು ಉದಯ ಪೂಜಾರಿ, ಪಿಎಚ್ ಡಿ ಪಡೆದಿರುವ ಡಾ.ಸುಶ್ಮಿತಾ, ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಸಂಜನಾ ಮಾತಿಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ವಿದ್ಯಾರ್ಥಿ ವೇತನ ನೀಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ, ರತ್ನಾಕರ ಪೂಜಾರಿ ಸ್ವಾಗತಿಸಿದರು. ಮುಳ್ಕಾಡು ಸತೀಶ ಪೂಜಾರಿ ವಂದಿಸಿದರು. ಶಿಕ್ಷಕ ಪ್ರಕಾಶ್ ಪೂಜಾರಿ ಮತ್ತು ಶಿಕ್ಷಕಿ ರಂಜಿತಾ ನಿರೂಪಿಸಿದರು.




