ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಆದಿಮುದ್ರ ಪ್ರಶಸ್ತಿ ಪ್ರಧಾನ.
ಬರಗಾಲವನ್ನು ಎಲ್ಲರೂ ಜಾಗೃತೆಯಿಂದ ಎದುರಿಸಿ : ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ
ಮುದ್ರಾಡಿ : ಬರಗಾಲ ಈ ಸಲ ನಮ್ಮೆಲ್ಲರನ್ನು ಕಾಡುತ್ತದೆ, ದುಡ್ಡು ಕೊಟ್ಟರೂ ವಿದ್ಯುತ್, ನೀರು, ಆಹಾರ ದೊರೆಯದ ಪರಿಸ್ಥಿತಿಯಿದೆ, ಸರ್ಕಾರಗಳು ಕೂಡ ಏನೂ ಮಾಡುವ ಹಾಗೆ ಇಲ್ಲ, ನಾವೆಲ್ಲರೂ ಬರಗಾಲವನ್ನು ಅತ್ಯಂತ ಜಾಗೃತೆಯಿಂದ ಎದುರಿಸಬೇಕಿದೆ. ನಮಗೆ ಕಷ್ಟದ ಕಾಲ. ದೇವರ ಪರೀಕ್ಷೆ, ಆ ಕಷ್ಟವನ್ನು ಎದರಿಸುವ ಶಕ್ತಿಯನ್ನು ಮುದ್ರಾಡಿಯ ಮಹಾಶಕ್ತಿ ಶ್ರೀಅಭಯಹಸ್ತೆ ಆದಿಶಕ್ತಿ, ನಂದಿಕೇಶ್ವರ ಮತ್ತು ಪರಿವಾರ ದೈವಗಳು ನೀಡಲಿ ಎಂದು ನವರಾತ್ರಿಯ ಸುಸಂದರ್ಭದಲ್ಲಿ ನಾಡಿಗಾಗಿ ಪ್ರಾರ್ಥಿಸುತ್ತೇನೆ ಎಂದು ಹೈದರಬಾದ್ ಹೋಟೆಲ್ ಗ್ರೂಪ್ಸ್ ಸಂಸ್ಥಾಪಕರಾದ ಕಲಾ ಪೋಷಕರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಹೇಳಿದರು.
ಅವರು ಶನಿವಾರ ಮುದ್ರಾಡಿ ನಾಟ್ಕದೂರು ನಮ ತುಳುವೆರ್ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಮುದ್ರಾಡಿ ನಾಟ್ಕದೂರು ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ ಅಕ್ಟೋಬರ್೨೨ ರ ತನಕ ನಡೆಯುವ ೨೬ನೇ ವರ್ಷದ ನವರಂಗೋತ್ಸವ, ನಾಟ್ಕ ಮುದ್ರಾಡಿಯ ೪೧ನೇ ವರ್ಷದ ಸಂಭ್ರಮದ ೭ನೇ ದಿನದ ಕಾರ್ಯಕ್ರಮದಲ್ಲಿ ನೀಡಲಾದ ಆದಿಮುದ್ರ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಸನ್ಮಾನಕ್ಕಿಂತ ಆದಿಶಕ್ತಿ ಅಮ್ಮನವರ ದರ್ಶನದ ಭಾಗ್ಯ ದೊರೆತಿರುವುದು ನನ್ನ ಸೌಭಾಗ್ಯ, ತಾಯಿಯ ಅನುಗೃಹ ಸದಾ ಇರಲಿ, ಮುದ್ರಾಡಿ ಕ್ಷೇತ್ರ ಮತ್ತು ನಮ ತುಳುವೆರ್ ಕಲಾಸಂಘಟನೆಯ ಬಗೆಗೆ ಅಪಾರ ಅಭಿಮಾನವಿದೆ. ಕ್ಷೇತ್ರ ಮತ್ತು ರಂಗಸಂಘಟನೆ ಇನ್ನಷ್ಟು ಪ್ರಜ್ವಲಿಸಲಿ, ನಾವು ಮಾರಣಕಟ್ಟೆ ಅರ್ಚಕ ಮನೆತನದವರು, ಮಾರಣಕಟ್ಟೆ ಕ್ಷೇತ್ರವನ್ನು ನಂಬಿದವರನ್ನು ದೇವರು ಎಂದೂ ಕೈಬಿಟ್ಟಿಲ್ಲ, ಮಾರಣಕಟ್ಟೆ ದೇವರ ದಯೆಯಿಂದ ನನ್ನ ಸಾಧನೆ ಸಾಧ್ಯವಾಗಿದೆ ಕೃಷ್ಣಮೂರ್ತಿ ಮಂಜ ಹೇಳಿದರು. ನವರಾತ್ರಿಯ ಸಮಯದಲ್ಲಿ ನಿತ್ಯವೂ ಚಂಡಿಕಾ ಯಾಗವನ್ನು ಮಾಡುವುದು ಬಹುದೊಡ್ಡ ಸಾಧನೆಯ ಕೆಲಸವನ್ನು ಕೃಷ್ಣಮೂರ್ತಿ ಮಂಜ ಹೇಳಿದರು.
ವೇದಮೂರ್ತಿ ವೇದಮೂರ್ತಿ ಅಜೆಕಾರು ಮಾಧವ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಅಮ್ಮನ ಸೇವೆಯನ್ನು ಮಾಡುವ ಅವಕಾಶ ಧರ್ಮಾಧಿಕಾರಿ ಸುಕುಮಾರ್ ಮೋಹನ್ ಕುಟುಂಬಕ್ಕೆ ದೊರೆತಿರುವುದು ಅತ್ಯಂತ ಪುಂಯದ ಅವಕಾಶ, ಮುದ್ರಾಡಿ ಕ್ಷೇತ್ರ ಇನ್ನಷ್ಟು ಪ್ರಜ್ವಲಿಸಲಿ ಎಂದು ಆಶಿಸಿದರು.
ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ರಂಗನಿರ್ದೇಶಕರಾದ ಧರ್ಮಾಧಿಕಾರಿ ಸುಕುಮಾರ್ ಮೋಹನ್ ಮಾತನಾಡಿದರು.
ರಂಗ ನಿರ್ದೇಶಕರಾದ ಕೆಎಸ್ಡಿಎಸ್ಎಲ್ ಚಂದ್ರು, ಬೆಂಗಳೂರಿನ ಹರ್ಷ ಕುಮಾರ್, ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಸುರೇಂದ್ರ ಮೋಹನ್, ಸುಧೀಂದ್ರ ಮೋಹನ್, ಉಮೇಶ್ ಕಲ್ಮಾಡಿ, ಸ್ವಸ್ತಿಕ್ ಮುದ್ರಾಡಿ, ಸ್ವರ್ಣಿಕಾ, ಸುಗಂಧಿ ಉಮೇಶ ಕಲ್ಮಾಡಿ, ವಾಣಿ ಸುಕುಮಾರ್ ಮೋಹನ್ ಮುಂತಾದವರು ಉಪಸ್ಥಿತರಿದ್ದರು.
ಸುಕುಮಾರ್ ಮೋಹನ್ ಸ್ವಾಗತಿಸಿ ವಂದಿಸಿದರು.
ನವರಾತ್ರಿಯ ೭ನೇ ದಿನದಲ್ಲಿ ವೇದಮೂರ್ತಿ ಅಜೆಕಾರು ಮಾಧವ ಭಟ್ ನೇತ್ರತ್ವದಲ್ಲಿ ಚಂಡಿಕಾಯಾಗ ನಡೆಯಿತು.



