Saturday, October 17, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿಯಲ್ಲಿ 7ನೇ ವರ್ಷದ ಮುದ್ರಾಡಿ ಶಾರದೋತ್ಸವ ಸಂಭ್ರಮ : ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ :...

ಮುದ್ರಾಡಿಯಲ್ಲಿ 7ನೇ ವರ್ಷದ ಮುದ್ರಾಡಿ ಶಾರದೋತ್ಸವ ಸಂಭ್ರಮ : ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ : ಭವ್ಯ ಮೆರವಣಿಗೆ.

ಜನಸೇವೆ ಮಾಡುವವರು ಜನನಾಯಕರಾಗುತ್ತಾರೆ : ಎಂ.ಎ.ಗಫೂರ್‌

ಮುದ್ರಾಡಿ : ಬಡವರು ಸೇರಿ ಜನರ ಸೇವೆಯನ್ನು ಮಾಡುವವರು ಜನನಾಯಕರಾಗುತ್ತಾರೆ, ಜನಸೇವಕರಾಗುತ್ತಾರೆ ಎಂಬುದಕ್ಕೆ ಮುದ್ರಾಡಿ ಮಂಜುನಾಥ ಪೂಜಾರಿ ಅವರೇ ಸಾಕ್ಷಿಯಾಗುತ್ತಾರೆ. ಅದ್ಭುತ ಸಂಘಟನಾ ಚಾತುರ್ಯದಿಂದ ಮುದ್ರಾಡಿಯಲ್ಲಿ ಶಾರದೋತ್ಸವ ವೈಭವದಿಂದ ನಡೆಯತ್ತದೆ. ನಿರಂತರ ಸೇವೆ ಮಾಡುವ ಅವಕಾಶ ದೊರೆಯಲಿ, ಸಿಕ್ಕ ಸದಾವಕಾಶದಿಂದ ಜನರ ಸೇವೆಯನ್ನು ನಿರಂತರವಾಗಿ ಮಾಡುತ್ತೇವೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್‌ ಹೇಳಿದರು.

ಅವರು ಶುಕ್ರವಾರ ಮುದ್ರಾಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ವತಿಯಿಂದ ಶ್ರೀ ಗುರುರಕ್ಷಾ ಸಹಕಾರಿ ಸಂಘದ ಆವರಣದಲ್ಲಿ ನಡೆಯುವ 7ನೇ ವರ್ಷದ ಮುದ್ರಾಡಿ ಶಾರದೋತ್ಸವದ ಕಮಲ ಚಂದೂ ಪೂಜಾರಿ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರೀಯ ಕಬಡ್ಡಿ ತಾರೆ ಧನಲಕ್ಷ್ಮೀ ಪೂಜಾರಿ ಉದ್ಘಾಟಿಸಿ ಕಾರ್ಯಕ್ರಮ ಉದ್ಘಾಟಿಸಿ ಸತತ ಕಠಿಣ ಪರಿಶ್ರಮದಿಂದ ಉತ್ತಮ ಸಾಧನೆ ಸಾಧ್ಯ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಎಲ್ಲರಿಗೂ ದೊರೆತ ಅವಕಾಶವನ್ನು ಬಳಸಿಕೊಂಡಾಗ ಉಜ್ವಲ ಭವಿಷ್ಯ ಲಭಿಸುತ್ತದೆ ಎಂದರು.

ಮುದ್ರಾಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಶಾರದೋತ್ಸವ ಮುದ್ರಾಡಿಯ ಊರಿನ ಹಬ್ಬದಂತೆ ಮೂಡಿಬರುತ್ತಿದೆ. ಯಶಸ್ವಿಗೆ ಸಹಕರಿಸಿದ ಸರ್ವರಿಗೂ ಋಣಿಯಾಗಿದ್ದೇವೆ. ಸಿಕ್ಕ ಅವಕಾಶವನ್ನು ಜನಸೇವೆಗೆ ಮೀಸಲಿರುಸುತ್ತೇನೆ ಎಂದರು.

ಮುದ್ರಾಡಿ ನಾರಾಯಣ ಭಟ್‌ ನೇತ್ರತ್ವದಲ್ಲಿ ಶಾರದೋತ್ಸವದ ಧಾರ್ಮಿಕ ಕಾರ್ಯಗಳು ವೈಭವದಿಂದ ನಡೆಯಿತು.  ವಿವಿಧ ಸರ್ಧೆಗಳು, ಸಭಾ ಮತ್ತು ಧಾರ್ಮಿಕ ಸಭೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳು, ಪ್ರತಿಭೆಗಳನ್ನು ಗೌರವಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಬಡ್ಕಿಲ್ಲಾಯ, ನಿವೃತ್ತ ಉಪನ್ಯಾಸಕ ಕೃಷ್ಣ ಎಂ, ವಿವಿಧ ಕ್ಷೇತ್ರಗಳ ಸಾಧಕರಾದ  ಹಿರಿಯ ಉದ್ಯಮಿ ನರಸಿಂಹ ಕಾಮತ್‌, ನಿವೃತ್ತ ಯೋಧ ಆನಂದ ಕಬ್ಬಿನಾಲೆ, ಶಶಿಧರ ಶೆಟ್ಟಿ ಮುದ್ರಾಡಿ, ರಮ್ಯಾ ಉಪ್ಪಳ, ಶಿವಾನಿ ಶೆಟ್ಟಿಗಾರ್‌, ನೈದಿಲ್‌ ಪೂಜಾರಿ, ಅಮಯ್‌ ಮುದ್ರಾಡಿ, ಅಧೀಶ್‌ ಮುದ್ರಾಡಿ, ಸಾನ್ವಿತ್‌ ಅವರನ್ನು ಗೌರವಿಸಲಾಯಿತು. ಶ್ರೇಷ್ಠ ಸಂಘಸಂಸ್ಥೆಗಳಿಗೆ ನೀಡುವ ಮುದ್ರಾಡಿ ಶಾರದೋತ್ಸವ ಪ್ರಶಸ್ತಿಯನ್ನು ಕಾಪೋಳಿ ಫ್ರೆಂಡ್ಸ್‌ ಕಬ್ಬಿನಾಲೆ ಅವರಿಗೆ ನೀಡಲಾಯಿತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುದ್ರಾಡಿ ಗ್ರಾಮ ಪಂಚಾಯತಿಯನ್ನು ಗೌರವಿಸಲಾಯಿತು. ಶ್ರೀ ಮುದ್ರಾಡಿ ಅವರ ” ಭೀಷ್ಮನಿಗೊಂದು ಪ್ರಶ್ನೆ ” ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್‌ ಕೋಟ ದಿಕ್ಸೂಚಿ ಭಾಷಣ ಮಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ರೇಷ್ಮಾ, ಕಾರ್ಕಳ ಯುವವಾಹಿನಿ ಅಧ್ಯಕ್ಷ ಪ್ರಕಾಶ ಪೂಜಾರಿ ಕೆರ್ವಾಸೆ, ಪೂನಾ ಉದ್ಯಮಿ ಶ್ರೀಧರ ಶೆಟ್ಟ ಮುದ್ರಾಡಿ, ವಕೀಲ ಕೃಷ್ಣ ಶೆಟ್ಟಿ ಹೆಬ್ರಿ, ವರಂಗ ಸಹಕಾರಿ ಸಂಘದ ಅಧ್ಯಕ್ಷ ಶುಭದರ ಶೆಟ್ಟಿ ಮುದ್ರಾಡಿ, ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ವಿವಿಧ ಗಣ್ಯರು, ಮುದ್ರಾಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಉಪಾಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಪದಾಧಿಕಾರಿಗಳು, ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.

ಮಾತಿಬೆಟ್ಟು ಪ್ರಕಾಶ ಪೂಜಾರಿ ಮತ್ತು ಚೈತ್ರ ಕಬ್ಬಿನಾಲೆ ನಿರೂಪಿಸಿದರು. ವಿವಿಧ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ ನಡೆಯಿತು. ರಾತ್ರಿ ತುಳು ಹಾಸ್ತಮಯ ನಾಟಕ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!