ಹೆಬ್ರಿ : ನರಕ ಚತುರ್ದಶಿಯ ಪರ್ವ ದಿನದಂದು ಭಾನುವಾರ ಹೆಬ್ರಿಯ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಶ್ರೀ ದೇವರ ವಿಶ್ವರೂಪದರ್ಶನವು ಹಾಗೂ ಶ್ರೀ ದೇವರಿಗೆ ವಿಶೇಷ ಫಲ ಪಂಚಾಮೃತಾಭಿಷೇಕವು ಅರ್ಚಕ ಹೆಚ್. ಮೋಹನರಾಜ್ ಜೋಯಿಸ್ ಅವರ ಪೌರೋಹಿತ್ಯದಲ್ಲಿ ಜರಗಿತು. ಹಿರಿಯ ಅರ್ಚಕ ಶ್ರೀಕಾಂತ ಆಚಾರ್ಯ, ಆನುವಂಶಿಕ ಮೊಕ್ತೇಸರ ತಾರಾನಾಥ ಬಲ್ಲಾಳ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಅರ್ಚಕರಾದ ಎನ್. ರಾಮಕೃಷ್ಣ ಆಚಾರ್ಯ, ಸುದರ್ಶನ್ ಜೋಯಿಸ್ ಹಾಗೂ ಊರಿನ ಗಣ್ಯರು ಭಕ್ತ ಸಮೂಹ ಉಪಸ್ಥಿತರಿದ್ದರು.
ಹೆಬ್ರಿಯ ಶ್ರೀ ಅನಂತಪದ್ಮನಾಭ ದೇವರ ವಿಶ್ವರೂಪ ದರ್ಶನ



