Sunday, August 9, 2026
Homeಹೆಬ್ರಿ ಗ್ರಾಮ ಪಂಚಾಯತ್‌ಹೆಬ್ರಿ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸಹಪಠ್ಯ ಚಟುವಟಿಕೆ ಉದ್ಘಾಟನೆ.

ಹೆಬ್ರಿ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸಹಪಠ್ಯ ಚಟುವಟಿಕೆ ಉದ್ಘಾಟನೆ.

ಹೆಬ್ರಿ : ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಚೆಸ್, ಕರ್ನಾಟಕ ಸಂಗೀತ, ಚಿತ್ರಕಲೆ, ಚೆಂಡೆ, ಯಕ್ಷಗಾನ, ತಬಲಾ, ಯೋಗ, ಕರಾಟೆ, ಕರಕುಶಲ, ಭರತನಾಟ್ಯ, ವೇದಗಣಿತ, ಕುಣಿತ ಭಜನೆ, ಸುಗಮ ಸಂಗೀತ, ಜಾನಪದ ನೃತ್ಯ, ಕೀಬೋರ್ಡ್, ಘೋಷ್ ಮುಂತಾದ ಸಹಪಠ್ಯ ಚಟುವಟಿಕೆ ತರಗತಿಯನ್ನು ಉದ್ಘಾಟಿಸಲಾಯಿತು.

ಅಮೃತ ಭಾರತಿ ಸಂಸ್ಥೆಯ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ  ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಂಚಪದೀಯ ಶಿಕ್ಷಣ ಆವಶ್ಯಕ  ಹಾಗೂ ಸಹಪಠ್ಯ ಚಟುವಟಿಕೆಯು ಮುಖ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದೊಂದಿಗೆ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು

ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಸಂಸ್ಥೆಯ ಮುಖ್ಯಸ್ಥರಾದ ಅರುಣ್ ಹೆಚ್ ವೈ, ಶಕುಂತಲಾ, ಸಂಸ್ಥೆಯ ಪಿ ಆರ್ ಓ ವಿಜಯಕುಮಾರ್ ಶೆಟ್ಟಿ, ಶಿಕ್ಷಕಿ ಸುಗೀತಾ ಸಹಪಠ್ಯ ಚಟುವಟಿಕೆಯ ‌ಮೇಲ್ವಿಚಾರಕರಾದ ಪ್ರಜಾತಾ ಮತ್ತು ಶ್ವೇತಾ ಎಸ್ ಹಾಗೂ ವಿವಿಧ ಸಹಪಠ್ಯ ಚಟುವಟಿಕೆಯ ಗೌರವ ಶಿಕ್ಷಕರು ಉಪಸ್ಥಿತರಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments