ಬೆಳ್ವೆ : ಸಮಾಜ ಸೇವೆ, ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡು,ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿ,ವಿವಿಧ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ ಬೆಳ್ವೆ ಅನಂತಪದ್ಮನಾಭ ಬಾಯರಿ ಅವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಅವರ ವತಿಯಿಂದ ಬೆಂಗಳೂರಿನಲ್ಲಿ ನಡೆದ ಬ್ರಾಹ್ಮಣ ಮಹಾಸಭೆಯ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್ ರಘುನಾಥ್, ಗೌರವಾಧ್ಯಕ್ಷ ಆರ್. ಲಕ್ಷಿಕಾಂತ್ , ಕಾರ್ಯದರ್ಶಿ ಡಾ.ಸತ್ಯಪ್ರಕಾಶ್ ಎನ್,ಖಜಾಂಚಿ ಸುಬ್ಬನರಸಿಂಹ ಹಾಗೂ ಇನ್ನೀತರರು ಉಪಸ್ಥಿತರಿದ್ದರು.
ಬೆಳ್ವೆ ಅನಂತಪದ್ಮನಾಭ ಬಾಯರಿ ಬೆಳ್ವೆ ಅವರಿಗೆ ಗೌರವ ಸನ್ಮಾನ


