Sunday, August 9, 2026
Homeವರಂಗ ಗ್ರಾಮ ಪಂಚಾಯತ್‌ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ ಸೀಯಾಳ ಅಭಿಷೇಕ

ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ ಸೀಯಾಳ ಅಭಿಷೇಕ

ಮುನಿಯಾಲು : ಕಾಡುಹೊಳೆ ಶ್ರೀ ಜಂಗಮೇಶ್ವರ ದೇವರಿಗೆ ಮುನಿಯಾಲು ಚಟ್ಕಲ್ ಪಾದೆ ಅಮೂಲ್ಯ ಸಹಾಯ ಹಸ್ತ ಟ್ರಸ್ಟ್ ವತಿಯಿಂದ ಸೀಯಾಳ ಅಭಿಷೇಕ ಸೋಮವಾರ ನಡೆಯಿತು.

ಕಾಲಕ್ಕೆ ಸರಿಯಾಗಿ ಉತ್ತಮ ಮಳೆ, ಬೆಳೆಯಾಗಿ ನಾಡು ಸುಭಿಕ್ಷೆಯಾಗುವಂತೆ ಮತ್ತು ಮಳೆಗಾಲ ಪೂರ್ತಿ ಮಳೆ ಬಂದು ಲೋಕ ಕಲ್ಯಾಣವಾಗಲಿ ಎಂದು ಟ್ರಸ್ಟ್ ವತಿಯಿಂದ ಪ್ರಾರ್ಥಿಸಿ, ಅಭಿಷೇಕ, ಪೂಜೆಯನ್ನು ಮಠದ ಪ್ರಧಾನ ಅರ್ಚಕ ವಿದ್ವಾನ್ ಗುಡ್ಡೆಅಂಗಡಿ ರಾಘವೇಂದ್ರ ಭಟ್ ನೆರವೇರಿಸಿದರು.

ಟ್ರಸ್ಟ್ ನ ಪ್ರಮುಖರಾದ ವರಂಗ ವೀಣಾ ಆರ್ ಭಟ್, ಸಂಯೋಜಕಿ ಶಕುಂತಲಾ ಪೂಜಾರಿ, ಸಹ ಸಂಯೋಜಕಿ ವಿದ್ಯಾ ನಾಯಕ್ ಮುನಿಯಾಲು, ಸದಸ್ಯರು ಪಾಲ್ಗೊಂಡರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments