ಮುನಿಯಾಲು: ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ, ಮುನಿಯಾಲು ಇವರ ವತಿಯಿಂದ ಶ್ರೀ ವಿಶ್ವಕರ್ಮ ಪೂಜಾ ಕಾರ್ಯಕ್ರಮವು ಸಂಘದ ಗೌರವಾಧ್ಯಕ್ಷರಾದ ನಾಗೇಶ್ ಆಚಾರ್ಯ ಅವರ ಮನೆಯ ವಠಾರದಲ್ಲಿ ಭಕ್ತಿಭಾವದಿಂದ ನಡೆಯಿತು.
ಸಂಘದ ಅಧ್ಯಕ್ಷರಾದ ಜಯಂತ ಆಚಾರ್ಯ ಮುನಿಯಾಲು ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳುವಾಯಿಯ ಶಿವಕುಮಾರ್ ಪುರೋಹಿತರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಪೂಜಾ ಕಾರ್ಯಕ್ರಮಕ್ಕೂ ಮುನ್ನ ಸಮಾಜದ ಹಿರಿಯ ಸದಸ್ಯರಾದ ನಾಗೇಶ್ ಆಚಾರ್ಯ ದಂಪತಿಗಳನ್ನು ಹಾಗೂ ಬಾಲಕೃಷ್ಣ ಆಚಾರ್ಯ ದಂಪತಿಗಳನ್ನು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಹಾಗೂ ವಿಶ್ವಕರ್ಮ ಸಮಾಜದ ಹಿರಿಯ ವ್ಯಕ್ತಿಗಳಾಗಿ ನೀಡಿದ ಕೊಡುಗೆಗಾಗಿ ಸಂಘದ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಕಾರ್ಕಳದ ಶಾಸಕ ಶ್ರೀ ವಿ. ಸುನಿಲ್ ಕುಮಾರ್ ಅವರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಶ್ರೀ ವಿಶ್ವಕರ್ಮ ದೇವರ ಆರಾಧನೆಯಲ್ಲಿ ಸಮಾಜದ ಸುಮಾರು 200ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಪೂಜೆಯ ಬಳಿಕ ಎಲ್ಲರಿಗೂ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಪ್ರಸಾದ ಸ್ವೀಕರಿಸಿದರು. ಕಾರ್ಯಕ್ರಮವು ಸಮಾಜದ ಸದಸ್ಯರ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿತು.




