Wednesday, September 23, 2026
Homeವರಂಗ ಗ್ರಾಮ ಪಂಚಾಯತ್‌ವರಂಗ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ.

ವರಂಗ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ.

ವರಂಗ : ಇಂದು ಸಿಬ್ಬಂದಿಗಳಿಗೆ ಮಾಡಿದ ಸನ್ಮಾನದಿಂದ ಅವರ ಜವಾಬ್ದಾರಿ ಹೆಚ್ಚಿದೆ. ಮುಂದಿನ ವರ್ಷ 1 ಕೋಟಿ ಲಾಭ ಬರಲೇಬೇಕು. ಸಂಘವು ಲಾಭದಲಿ ನಡೆಯಬೇಕಾದರೆ ನಮಗೆಲ್ಲರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ವರಂಗ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಮುದ್ರಾಡಿ ಶುಭದರ ಶೆಟ್ಟಿ ಹೇಳಿದರು.

ಅವರು ವರಂಗ ಸಹಕಾರಿ ವ್ಯವಸಾಯನಿಕ ಸಂಘದ ವತಿಯಿಂದ ಶನಿವಾರ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಬಾಯಾರಿ, ಲಕ್ಷ್ಮಣ ಆಚಾರ್ಯ, ಜಗದೀಶ್ ಹೆಗ್ಡೆ ಹಾಗೂ ಅಧ್ಯಕ್ಷರಾದ ಶುಭದರ ಶೆಟ್ಟಿ, ಸಹಿತ ಸಿಬ್ಬಂದಿ, ಪಿಗ್ನಿ ಸಂಗ್ರಹಕರು ಸೇರಿದಂತೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಉತ್ತಮ ಕೃಷಿಕರಿಗೆ ಗೌರವಿಸಲಾಯಿತು.

ಉಪಾಧ್ಯಕ್ಷ ಕೃಷ್ಣ ಕಾಂತ್ ನಾಯಕ್, ಹೆಚ್ಚುವರಿ ಕಾರ್ಯದರ್ಶಿ ಜಯಂತ್ ಕುಮಾರ್, ಸಿಇಓ ಕೆ ಗೋಪಾಲಕೃಷ್ಣ ಪೈ, ನಿರ್ದೇಶಕರಾದ ಚಂದ್ರಶೇಖರ ಬಾಯರಿ, ಲಕ್ಷ್ಮಣ ಆಚಾರ್ಯ, ಕೃಷ್ಣ ಆಚಾರ್ಯ, ಸುರೇಶ ಶೆಟ್ಟಿಗಾರ, ಜಗದೀಶ ಹೆಗ್ಡೆ, ಸುಧನ್ವ ಪಾಣರ, ಸುರೇಶ್ ಬಿ ನಾಯ್ಕ, ಇಂದಿರಾ ಪೂಜಾರ್ತಿ, ಶಶಿಕಲಾ ಡಿ ಪೂಜಾರಿ, ಗೋಪಿನಾಥ್ ಭಟ್ ಇದ್ದರು.

ಸಿಇಓ ಗೋಪಾಲಕೃಷ್ಣ ಪೈ ವರದಿ ವಾಚಿಸಿದರು. ನಿರ್ದೇಶಕರಾದ ಗೋಪಿನಾಥ್ ಭಟ್ ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!