Sunday, August 9, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿಯಲ್ಲಿ ಗೋಪಾಲ ಭಂಡಾರಿ ಅವರ 7ನೇ ವರ್ಷ ಸಂಸ್ಮರಣೆ:ಸಮಾಜಕ್ಕೆ ಗೋಪಾಲ ಭಂಡಾರಿ ಸೇವೆ ಸ್ಮರಣೀಯ- ಮಂಜುನಾಥ...

ಮುದ್ರಾಡಿಯಲ್ಲಿ ಗೋಪಾಲ ಭಂಡಾರಿ ಅವರ 7ನೇ ವರ್ಷ ಸಂಸ್ಮರಣೆ:ಸಮಾಜಕ್ಕೆ ಗೋಪಾಲ ಭಂಡಾರಿ ಸೇವೆ ಸ್ಮರಣೀಯ- ಮಂಜುನಾಥ ಪೂಜಾರಿ.

ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಹೆಬ್ರಿ ಗೋಪಾಲ ಭಂಡಾರಿ ಅವರ 7ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಶನಿವಾರ ಮುದ್ರಾಡಿಯ ಜನಸೇವಾ ಕಚೇರಿಯಲ್ಲಿ ಗೋಪಾಲ ಭಂಡಾರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.

ಗೋಪಾಲ ಭಂಡಾರಿ ಅವರ ಜನಪರ ಸೇವೆ, ಸರಳ ವ್ಯಕ್ತಿತ್ವ ಹಾಗೂ ಸಮಾಜದ ಅಭಿವೃದ್ಧಿಗೆ ನೀಡಿದ ಅಮೂಲ್ಯ ಕೊಡುಗೆಗಳನ್ನು ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿಯವರು ಸ್ಮರಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಹಿರಿಯ ಕಾಂಗ್ರೆಸ್ ಮುಖಂಡ ಶೀನ ಪೂಜಾರಿ, ಮುದ್ರಾಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ, ಗುರುರಕ್ಷಾ ಸೌಹಾರ್ಧ ಸಹಕಾರಿ ಬ್ಯಾಂಕ್ ನಿರ್ದೇಶಕ ಸತೀಶ್ ಶೇರಿಗಾರ್, ಮುದ್ರಾಡಿ ಚಾಲಕ ಮಾಲಕ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಸಂಘದ ಸದ್ಯಸರು ,ಹೆಬ್ರಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಶೇಖರ ಬಾಯಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments