ಕುಚ್ಚೂರು : ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದ ಬಾಗಲ್ ಜಡ್ಡು ಎಂಬಲ್ಲಿಯ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಕುಚ್ಚೂರು ಬಾಗಲ್ ಜಡ್ಡು ಕುಶಾಲ ಶೆಟ್ಟಿ ( 55 ) ಎಂಬವರು ಜೂನ್ 28 ರಂದು ಮನೆಯಲ್ಲಿ ತನ್ನ ಮಗನೊಂದಿಗೆ ಗಲಾಟೆ ಮಾಡಿ ಕೋಪದಿಂದ ಮನೆ ಬಿಟ್ಟು ಹೋಗುವುದಾಗಿ ಹೇಳಿ ಬಟ್ಟೆಬರೆಯೊಂದಿಗೆ ತನ್ನ ಓಮ್ನಿ ಕಾರಿನಲ್ಲಿ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಕುಶಾಲ ಶೆಟ್ಟಿ ಅವರನ್ನು ಪರಿಚಯಸ್ಥರು ಮತ್ತು ಸಂಬಂಧಿಕರ ಮನೆಯಲ್ಲಿ ಹುಡುಕಾಡಿ ಎಲ್ಲಿಯೂ ಪತ್ತೆಯಾಗದ ಹಿನ್ನಲೆಯಲ್ಲಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕುಚ್ಚೂರು : ವ್ಯಕ್ತಿ ನಾಪತ್ತೆ; ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು


