Wednesday, September 23, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿ ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಮುದ್ರಾಡಿ ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಶ್ರೀಗುರುರಕ್ಷಾ ಸಹಕಾರಿ ಸಂಘವನ್ನು ಮುದ್ರಾಡಿಯ ಜನರ ಬ್ಯಾಂಕ್ ಆಗಿ ಬೆಳೆಸಬೇಕು : ಮಂಜುನಾಥ ಪೂಜಾರಿ

ಮುದ್ರಾಡಿ : ಜನರ ಸೇವೆಗಾಗಿ ಬಡವರಿಗೆ ನೆರವಾಗಲು ಸಂಸ್ಥೆಯನ್ನು ಸ್ಥಾಪಿಸಿದ್ದೇವೆ. ಆರೋಗ್ಯ, ಶಿಕ್ಷಣ ಮತ್ತು ತುರ್ತು ಸಂದರ್ಭದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಜನತೆಗೆ ಸೇವೆಯನ್ನು ನಿರಂತರವಾಗಿ ನೀಡುತ್ತೇವೆ. ಶ್ರೀಗುರುರಕ್ಷಾ ಸಹಕಾರಿ ಸಂಘವನ್ನು ಮುದ್ರಾಡಿಯ ಜನರ ಬ್ಯಾಂಕ್ ಆಗಿ ಬೆಳೆಸಬೇಕು ಎಂದು
ಮುದ್ರಾಡಿ ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ರಾಜ್ಯದ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಅವರು ಬುಧವಾರ ಮುದ್ರಾಡಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಭವನದಲ್ಲಿ ಮುದ್ರಾಡಿ ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಾಭಗಳಿಕೆಯ ಉದ್ದೇಶದಿಂದ ಆರಂಭಗೊಂಡ ಸಂಸ್ಥೆ ನಮ್ಮದಲ್ಲ, ಸಣ್ಣ ಮೊತ್ತದಿಂದ ಆರಂಭಗೊಂಡ ಸಹಕಾರಿ ಸಂಸ್ಥೆ ಈಗ 10 ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದೆ. ಸಾಮಾನ್ಯ ವರ್ಗದ ಎಲ್ಲರೂ ಸೇರಿ ಸಂಸ್ಥೆಯನ್ನು ಬೆಳೆಸುತ್ತಿದ್ದಾರೆ. ಹಾಗಾಗಿ ನಮಗೆ ಶಕ್ತಿ ಬಂದಿದೆ. ಎಲ್ಲರ ಸಹಕಾರದಲ್ಲಿ ಮುಂದಿನ 5 ವರ್ಷದಲ್ಲಿ 100 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿ ಜಿಲ್ಲೆಯ ಹಲವೆಡೆ ಶಾಖೆಗಳನ್ನು ತೆರೆಯುವ ಯೋಜನೆ ಇದೆ ಎಂದು ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಹುಟ್ಟೂರು ಸ್ವರ್ಗಕ್ಕಿಂತಲೂ ಮೀಗಿಲು ಎಂಬಂತೆ ನನ್ನ ಹುಟ್ಟೂರಿನ ಮಂದಿಯ ಪ್ರೀತಿ ಆಶೀರ್ವಾದದಿಂದ ಎತ್ತರಕ್ಕೆ ಬೆಳೆದಿದ್ದೇನೆ. ಊರಿನ ಜನರ ಸೇವೆಯನ್ನು ನಿರಂತರವಾಗಿ ಮಾಡುತ್ತೇನೆ ಎಂದು ಮಂಜುನಾಥ ಪೂಜಾರಿ ಕೃತಜ್ಞತೆ ಸಲ್ಲಿಸಿದರು.

ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ನಾರಾಯಣ ಪೂಜಾರಿ ವಾರ್ಷಿಕ ವರದಿ ಮಂಡಿಸಿದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಆರೋಗ್ಯ ಸಹಾಯಧನ ವಿತರಿಸಲಾಯಿತು. ನಾಟಿ ವೈಧ್ಯರಾದ ಶೀನ ಶೆಟ್ಟಿಗಾರ್, ಸುಶೀಲಾ ಪೂಜಾರಿ, ನಿವೃತ್ತ ಶಿಕ್ಷಕಿ ಮರಿಯಕ್ಕ ಮತ್ತು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಸತೀಶ್ ಸೇರಿಗಾರ್ ಕಾರ್ಯಕ್ರಮ ಉದ್ಘಾಟಿಸಿದರು.

ನಿರ್ದೇಶಕರಾದ ಆದರ್ಶ ಎಂ ಪೂಜಾರಿ, ಸುರೇಶ್ ಶೆಟ್ಟಿಗಾರ್, ಕೃಷ್ಣ ನಾಯ್ಕ್, ದಿನೇಶ್ ಕುಲಾಲ್, ಚೇತನ್ ಪೂಜಾರಿ, ಮುದ್ದು ಪೂಜಾರಿ, ಸರೋಜಾ ಎಸ್ ಹೆಗ್ಡೆ, ಚಿತ್ರಾ ಪೂಜಾರಿ, ಪ್ರಶಾಂತ ಶೆಟ್ಟಿ, ರವಿ ಶೆಟ್ಟಿಗಾರ್, ಸಿಬ್ಬಂದಿ ವರ್ಗದವರಾದ ವಿದ್ಯಾ ಸುರೇಂದ್ರ, ಅಮಿತಾ ಗಣೇಶ್ ಶೆಟ್ಟಿ, ನಿಶ್ಮಿತಾ, ಶ್ರೀಕಾಂತ್ ಶೆಟ್ಟಿಗಾರ್, ನವೀನ್, ಸಂಘದ ಸದಸ್ಯರು ಉಪಸ್ಥಿತರಿದ್ದರು.

ಎಚ್. ನಾರಾಯಣ ಪೂಜಾರಿ ನಿರೂಪಿಸಿ ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!