Sunday, August 9, 2026
Homeವರಂಗ ಗ್ರಾಮ ಪಂಚಾಯತ್‌ವರಂಗ ಮಾತಿಬೆಟ್ಟು ಶಿಶುಪಾಲ ಜೈನ್ ನಿಧನ

ವರಂಗ ಮಾತಿಬೆಟ್ಟು ಶಿಶುಪಾಲ ಜೈನ್ ನಿಧನ

ವರಂಗ : ವರಂಗ ಸಮೀಪದ ಮಾತಿಬೆಟ್ಟಿನ ನಿವಾಸಿ, ಹಿರಿಯ ಕೃಷಿಕರಾದ ಜಿನಸಿ ಅಂಗಡಿಯ ಮಾಲಕರಾಗಿದ್ದ ಶಿಶುಪಾಲ ಜೈನ್ (82) ಅವರು ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಸರಳ, ಸಜ್ಜನಿಕೆ ಹಾಗೂ ಪ್ರಾಮಾಣಿಕ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿದ್ದ ಅವರು, ಕೃಷಿಯ ಜೊತೆಗೆ ಸಣ್ಣ ಜಿನಸಿ ಅಂಗಡಿಯನ್ನು ನಡೆಸುತ್ತಾ ಗ್ರಾಮಸ್ಥರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದರು. ಅವರ ನೇರ ನಡೆ ನುಡಿ, ಪ್ರಾಮಾಣಿಕ ವ್ಯವಹಾರ ಮತ್ತು ಸಮಾಜಮುಖಿ ಮನೋಭಾವದಿಂದ ಸ್ಥಳೀಯರಲ್ಲಿ ಗೌರವಕ್ಕೆ ಪಾತ್ರರಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments