Saturday, November 7, 2026
Homeವರಂಗ ಗ್ರಾಮ ಪಂಚಾಯತ್‌ಕುಕ್ಕುದಕಟ್ಟೆ ಪರಂಪರೆ ಮುಂದುವರಿಸಲು “ಕಟ್ಟೆ ಲೋಕಾರ್ಪಣೆ”.

ಕುಕ್ಕುದಕಟ್ಟೆ ಪರಂಪರೆ ಮುಂದುವರಿಸಲು “ಕಟ್ಟೆ ಲೋಕಾರ್ಪಣೆ”.

“ಒಂದು ಹೆಜ್ಜೆ ಪರಂಪರೆಯ ಉಳಿವಿಗಾಗಿ – ಜನನಿ ಫ್ರೆಂಡ್ಸ್  ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ಮಹತ್ವದ ಹೆಜ್ಜೆ.

ಇದೇ 8 ರಂದು ಗೋಪೂಜೆ ಹಾಗೂ ಮಾವಿನ ಗಿಡ ನೆಡುವ ಮೂಲಕ ಕಟ್ಟೆ ಲೋಕಾರ್ಪಣೆ.

ಪ್ರಜಾವಾಣಿ ವಾರ್ತೆ

ಕುಕ್ಕುದಕಟ್ಟೆ ( ಮುನಿಯಾಲು ) : ಜನ ಸೇವೆಗಾಗಿಯೇ ಹುಟ್ಟಿಕೊಂಡ ಸಮಾನ ಮನಸ್ಕರ ಸಂಸ್ಥೆ ಜನನಿ ಫ್ರೆಂಡ್ಸ್  ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ತೆರೆಮರೆಯಲ್ಲಿ ಆರಂಭದಿಂದ ನಿರಂತರವಾಗಿ ಜನರ ಸೇವೆಯನ್ನು ಮಾಡುತ್ತ ಬಂದಿದೆ. ಊರಿನ ಅಭಿವೃದ್ಧಿಯಲ್ಲಿ ಕೈ ಜೋಡಿಸಿ ನಿರಂತರ ಸಹಕಾರ ನೀಡುವುದು. ಪರಿಸರ ಸ್ವಚ್ಚತೆ, ಊರಿನ ರಸ್ತೆಯ ಒಕ್ಕೆಲಗಳ ಸ್ವಚ್ಚತೆ, ಕಸ ವಿಲೇವಾರಿ, ಅನಾರೋಗ್ಯಕ್ಕೆ ತಕ್ಷಣದ ನೆರವು, ಬಡವರಿಗೆ ನೆರವು, ಆರೋಗ್ಯ ಶಿಬಿರಗಳು, ಕ್ರೀಡೆಗೆ ಪ್ರೋತ್ಸಾಹಕ ನೆರವು, ಸಂಕಷ್ಟ ಕಾಲಕ್ಕೆ ಸ್ಥಳೀಯರಿಗೆ ವಿಶೇಷ ನೆರವು, ಶ್ರಮದಾನದ ಮೂಲಕ ಜನಸೇವೆ ಹೀಗೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದು ಜನಮನದಲ್ಲಿ ಮನೆ ಮಾಡಿದೆ. ಮಾತೃಭೂಮಿ ಹಾಗೂ ಕರ್ಮಭೂಮಿ ಆಗಿರುವ ಕುಕ್ಕುದಕಟ್ಟೆಯನ್ನು ಕೇಂದ್ರವಾಗಿರಿಸಿಕೊಂಡು, ಸಮಾಜಸೇವೆಯ ಉದ್ದೇಶದಿಂದ ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಸೇವಾ ಟ್ರಸ್ಟ್ (ರಿ) ಸ್ಥಾಪಿಸಲಾಗಿದೆ.

ಇದೀಗ ಜನನಿ ಫ್ರೆಂಡ್ಸ್  ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ಸದಸ್ಯರು ತಮ್ಮೂರಿನ ಪರಂಪರೆಯ ಉಳಿವಿಗಾಗಿ ” ಒಂದು ಹೆಜ್ಜೆ ಪರಂಪರೆಯ ಉಳಿವಿಗಾಗಿ” ಧ್ಯೇಯದೊಂದಿಗೆ ಮಹತ್ವದ ಹೆಜ್ಜೆ ಇಟ್ಟಿದೆ.

ಸುಮಾರು ವರ್ಷಗಳ ಹಿಂದೆ ಕುಕ್ಕುದಕಟ್ಟೆಯ ಹಿರಿಯರು ಭಾವನಾತ್ಮಕ ಸಂಬಂಧದ ಪ್ರತೀಕವಾಗಿ, ಅಲ್ಲಿದ್ದ ಮಾವಿನ ಮರಗಳಿಗೆ ಕಟ್ಟೆ ನಿರ್ಮಿಸಿ ಗೌರವ ಸಲ್ಲಿಸಿದ್ದರು. ಅಂತಹ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಜನನಿ ಫ್ರೆಂಡ್ಸ್  ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ಸಣ್ಣ ಪ್ರಯತ್ನವೇ ಕುಕ್ಕುದ “ಕಟ್ಟೆ ಲೋಕಾರ್ಪಣೆ” ಎಂಬ ಹೆಸರಿನಿಂದ ಪ್ರಸ್ತುತವಾಗಿಸುತ್ತಿದೆ.

ಕುಕ್ಕುದಕಟ್ಟೆಯ ಹಿರಿಯರು ನೀಡಿದ ಆ ನೆನಪು ಮತ್ತು ಪರಂಪರೆಯನ್ನು ಉಳಿಸುವ ಉದ್ದೇಶದಿಂದ, ಇದೇ ೮ ರಂದು ಭಾನುವಾರ ಬೆಳಿಗ್ಗೆ ಗೋಪೂಜೆ ಹಾಗೂ ಮಾವಿನ ಗಿಡ ನೆಡುವ ಮೂಲಕ ಕಟ್ಟೆ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

“ನಮ್ಮ ಕುಕ್ಕುದಕಟ್ಟೆ – ನಮ್ಮೆಲ್ಲರ ಹೆಮ್ಮೆ ” ವಿಶೇಷ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸುವಂತೆ ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ಅಧ್ಯಕ್ಷ ಚೇತನ್ ಕುಮಾರ್ ಮತ್ತು ಪದಾಧಿಕಾರಿಗಳು, ಸದಸ್ಯರು ವಿನಂತಿಸಿದ್ದಾರೆ.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!