ಜನಪದ ಸಂಸ್ಕೃತಿ ಪರಂಪರೆಯನ್ನು ಯುವಜನತೆ ಅರಿಯಬೇಕು :
ಮುನಿಯಾಲು : ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹೆಬ್ರಿ ಮತ್ತು ಕಾರ್ಕಳ ವಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂ ಸೇವಕರಿಗೆ ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಸ್ಪರ್ಧೆಯು ಜನಪದ ಗೀತೆ, ವೈಯಕ್ತಿಕ ಮತ್ತು ಜನಪದಗೀತೆ ಗುಂಪು ಎಂಬ ೨ ವಿಭಾಗಗಳಲ್ಲಿ ಜರುಗಿತು. ಕಾರ್ಯಕ್ರಮವನ್ನು ಆಯೋಜಿಸಿದ್ದ ಮುನಿಯಾಲು ಕಾಲೇಜಿಗೆ ಹೆಬ್ರಿ ಮತ್ತು ಕಾರ್ಕಳ ವಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವ್ಯಾಪ್ತಿಗೆ ಬರುವ ಭುವನೇಂದ್ರ ಪ್ರಥಮ ದರ್ಜೆ ಕಾಲೇಜು ಕಾರ್ಕಳ, ಎಂ.ಪಿ.ಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ, ಶಿರ್ವ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಕಾಲೇಜುಗಳಿಂದ ೩೦ ವಿದ್ಯಾರ್ಥಿಗಳು ಆಗಮಿಸಿದ್ದರು. ಕಾರ್ಯಕ್ರಮವನ್ನು ನಾಡಗೀತೆ ಹಾಡುವ ಮೂಲಕ ಆರಂಭಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಗೋಪಿನಾಥ್ ಭಟ್ ಭಾಗವಹಿಸಿದ್ದರು. ಸಾಂಸ್ಕೃತಿಕ ಚಟುವಟಿಕೆಗಳ ಉದ್ಧೇಶ, ಸ್ಪರ್ಧೆಯ ಮಹತ್ವ ಹಾಗೂ ಜನಪದ ಸಂಸ್ಕೃತಿ ಪರಂಪರೆಯನ್ನು ಇಂದಿನ ಯುವಜನತೆ ಅರಿಯುವ ಅನಿವಾರ್ಯವಿದೆ ಎಂದು ಹೇಳಿದರು.
ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಧಾಕರ ಕೆ.ಜಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಲೇಜಿನ ಅಭಿವೃದ್ದಿಗೆ ಸದಾ ಬೆನ್ನೆಲುಬಾಗಿ ದುಡಿಯುತ್ತಿರುವ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರ ಕಾಯಕ ನಿಷ್ಠೆ, ಕಾಳಜಿ ಹಾಗೂ ಬಡ ವಿದ್ಯಾರ್ಥಿಗಳ ಬಗೆಗೆ ಇರುವ ಉದಾರತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಸಿಬ್ಬಂದಿ ವರ್ಗದವರಾದ ವಿಶ್ವೇಶ್ವರ ಎನ್ ಗಾಂವ್ಕರ್, ಶ್ಯಾಮಲ, ಡಾ.ಆನಂದ್ ಕುಮಾರ್, ಶೈಲಜ, ಪೂರ್ಣಿಮ, ನಂದಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಮಾಡಿಕೊಟ್ಟರು. ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ದೇವರಾಜು.ಕೆ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಸಹ ಅಧಿಕಾರಿಗಳಾದ ಬಿಂದು. ಎ ನಿರೂಪಿಸಿದರು.

ವಿದ್ಯಾರ್ಥಿಗಳು ವಿಭಿನ್ನ ಬಗೆಯ ಜನಪದಗೀತೆಗಳನ್ನು ಹಾಡಿದರು. ಕೆಲವು ತಂಡಗಳು ಮೂಲಧಾಟಿಯ ಜನಪದಗೀತೆಗಳನ್ನು ಆಯ್ಕೆ ಮಾಡಿಕೊಂಡು ಪ್ರಸ್ತುತಪಡಿಸಿದರು. ಕೆಲವರು ಜನಪ್ರಿಯಗೀತೆಗಳನ್ನು ಹಾಡಿದರು. ತೀರ್ಪುಗಾರರಾಗಿ ವರಲಕ್ಷ್ಮಿಭಾಗವಹಿಸಿದ್ದರು.
ಜನಪದಗೀತೆ ವೈಯುಕ್ತಿಕ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಹಿರಿಯಡಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ವಿಖ್ಯಾತ್ ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಮುನಿಯಾಲು ಕಾಲೇಜಿನ ವಿದ್ಯಾರ್ಥಿನಿ ನಿಧಿ ಪಡೆದುಕೊಂಡರು. ತೃತೀಯ ಬಹುಮಾನವನ್ನು ಹೆಬ್ರಿ ಕಾಲೇಜಿನ ಧನ್ಯಶ್ರೀ ಪಡೆದುಕೊಂಡರು. ಜನಪದಗೀತೆಯ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಭುವನೇಂದ್ರ ಕಾಲೇಜಿನ ವರ್ಷ ಮತ್ತು ತಂಡದವರು ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಹಿರಿಯಡಕ ಕಾಲೇಜಿನ ತ್ರಿಶಾ ಮತ್ತು ತಂಡದವರು ಪಡೆದುಕೊಂಡರು. ತೃತೀಯ ಬಹುಮಾನವನ್ನು ಮುನಿಯಾಲು ಕಾಲೇಜಿನ ನಿಧಿ ಮತ್ತು ತಂಡದವರು ಪಡೆದುಕೊಂಡರು.



