ನಾಡ್ಪಾಲು : ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮ ಪಂಚಾಯತಿಯಲ್ಲಿ 9 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಕಾಡೂರು ಪಂಚಾಯತಿಗೆ ವರ್ಗಾವಣೆಗೊಂಡಿರುವ ದೇವಕಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಗ್ರಾಮ ಪಂಚಾಯತಿ ಸಭಾಂಗಣ ದಲ್ಲಿ ನಡೆಯಿತು. ಪಂಚಾಯತ್ ಆಡಳಿತಾಧಿಕಾರಿ ವಿದ್ಯಾಧರ ಹೆಗ್ಡೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಸ್ಥರ ಪರವಾಗಿ ಕಾರ್ಯದರ್ಶಿ ದೇವಕಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಜಲಜ ಪೂಜಾರ್ತಿ, ದಿನೇಶ ಹೆಗ್ಡೆ, ನವೀನ್ ಕುಮಾರ್, ನಿವೃತ್ತ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪುರಂದರ ಎಸ್, ಆಯುಷ್ ವೈದ್ಯಧಿಕಾರಿ ಡಾ. ರಶ್ಮಿ ಹಾಗೂ ಮಾಜಿ ಪಂಚಾಯತಿ ಸದಸ್ಯರು ಹಾಗೂ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೀತಲ್ ನಿರೂಪಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.


