Sunday, August 9, 2026
HomeUncategorizedಮುದ್ರಾಡಿಯ ಮದಗ ಕೆರೆಯಂಗಳದಲ್ಲಿ 100 ಗಿಡಗಳ ನಾಟಿ ಕಾರ್ಯಕ್ರಮ

ಮುದ್ರಾಡಿಯ ಮದಗ ಕೆರೆಯಂಗಳದಲ್ಲಿ 100 ಗಿಡಗಳ ನಾಟಿ ಕಾರ್ಯಕ್ರಮ

ಮುದ್ರಾಡಿ : ಮುದ್ರಾಡಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪುನ:ಶ್ಚೇತನಗೊಳಿಸಿದ 954ನೇ ಕೆರೆ ಮುದ್ರಾಡಿ ಮೇಲ್ಬೆಟ್ಟು ಮದಗದ ಸುತ್ತಲು ಕೆರೆ ಅಂಗಳದಲ್ಲಿ ವಿವಿಧ ಹಣ್ಣಿನ 100 ಗಿಡಗಳ ನಾಟಿ ಕಾರ್ಯ ಗುರುವಾರ ನಡೆಯಿತು. ಹಲಸು, ಮಾವು, ನೇರಳೆ, ನೆಲ್ಲಿಕಾಯಿ, ರಂಬೂಟನ್, ಪುನರ್‌ ಪುಳಿ ಗಿಡಗಳನ್ನು ನಾಟಿ ಮಾಡಲಾಯಿತು.

ಕೆರೆ ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ, ಗೌರವಾಧ್ಯಕ್ಷ ಗಣಪತಿ ಮುದ್ರಾಡಿ, ಮುದ್ರಾಡಿ ಉಪ ವಲಯ ಸಂರಕ್ಷಣಾಧಿಕಾರಿ ಗೋವಿಂದ ಪಟಗಾರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ರೇಷ್ಮಾ, ಮುದ್ರಾಡಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುಭಾಷ್ ಎಂ ಖಾರ್ವಿ, ಕೆರೆ ಸಮಿತಿಯ ಉಪಾಧ್ಯಕ್ಷ ಶುಭದರ ಶೆಟ್ಟಿ, ಸನತ್ ಕುಮಾರ್, ಪ್ರಮುಖರಾದ ಸಂತೋಷ ಶೆಟ್ಟಿ, ಆಟೋ ಯೂನಿಯನ್ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಅಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಬಾಲಚಂದ್ರ ಮುದ್ರಾಡಿ, ಅರಣ್ಯ ಇಲಾಖೆ ರಮೇಶ ಕೆ, ಪ್ರಮುಖರಾದ ಮಂಜುನಾಥ್ ಶೆಟ್ಟಿಗಾರ್, ಶ್ರೀನಾಥ್ ಶೆಟ್ಟಿಗಾರ್, ಮುದ್ದು ಪೂಜಾರಿ, ಹೇಮಾವತಿ, ಅಜಿತ, ಶ್ರೀಧರ್, ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಮತ್ತು ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments