Sunday, August 9, 2026
Homeಹೆಬ್ರಿ ಗ್ರಾಮ ಪಂಚಾಯತ್‌ಜು. 16ರಂದು ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಉಳಿಸಿ ಬೃಹತ್‌ ಅಭಿಯಾನ: ಭಕ್ತ ಸಮೂಹ ಭಾಗವಹಿಸುವಂತೆ...

ಜು. 16ರಂದು ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಉಳಿಸಿ ಬೃಹತ್‌ ಅಭಿಯಾನ: ಭಕ್ತ ಸಮೂಹ ಭಾಗವಹಿಸುವಂತೆ ಮನವಿ

ಹೆಬ್ರಿ : ಹೆಬ್ರಿಯಲ್ಲಿ  ಹಾದು ಹೋಗುವ  169- A  ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಇತಿಹಾಸ ಪ್ರಸಿದ್ಧ ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನವು.ಸರ್ವೇ ನಂಬರ್ 69/13 ರ 56 ಸೆಂಟ್ಸ್ ಜಾಗದಲ್ಲಿದೆ.‌  ಇದರ 13 ಸೆಂಟ್ಸ್ ಜಾಗವನ್ನು ಹೆದ್ದಾರಿಗೆ ವಶಪಡಿಸಿಕೊಳ್ಳುವ ಆಜ್ಞೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರಕಟಿಸಿದೆ. ದೇವಸ್ಥಾನದ ಭಕ್ತರು ಹೆಬ್ರಿ ಶ್ರೀ ಅನಂತಪದ್ಮನಾಭ ದೇವಾಲಯದ ವಾಸ್ತುವಿಗೆ ಯಾವುದೇ ತೊಂದರೆಯಾಗದಂತೆ ” ದೇವಸ್ಥಾನವನ್ನು ಉಳಿಸಿ ” ಎಂಬ ಘೋಷಣೆಯೊಂದಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಅಭಿಯಾನ ಇದೇ ಜುಲೈ 16 ನಡೆಯಲಿದೆ.

ಮಧ್ಯಾಹ್ನ ಗಂಟೆ 12 ಕ್ಕೆ ದೇವಸ್ಥಾನದಲ್ಲಿ ಸೇರಿ ಬೃಹತ್‌ ಮೆರವಣಿಗೆ ಮೂಲಕ ಹೆಬ್ರಿ ತಾಲ್ಲೂಕು ಕಚೇರಿಗೆ ತೆರಳಿ ಅಧಿಕಾರಿಗಳೆ ಮನವಿ ಸಲ್ಲಿಸಲಾಗುವುದು. ಪ್ರತಿ ಮನೆಯಿಂದಲೂ ಭಕ್ತರು ಬಂದು ಮೆರವಣಿಗೆಯಲ್ಲಿ ಭಾಗವಹಿಸಿ ದೇವಸ್ಥಾನ ಉಳಿಸಿ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಆಡಳಿತ ಮೋಕ್ತೇಸರ ತಾರನಾಥ ಬಲ್ಲಾಳ್‌ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments