Sunday, August 9, 2026
Homeಹೆಬ್ರಿಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಉಳಿಸಿ : ಶಾಸಕ ಸುನೀಲ್‌ ಕುಮಾರ್‌ ಅವರಿಗೆ ಮನವಿ

ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಉಳಿಸಿ : ಶಾಸಕ ಸುನೀಲ್‌ ಕುಮಾರ್‌ ಅವರಿಗೆ ಮನವಿ

ದೇವಸ್ಥಾನದ ಜಾಗ ಉಳಿಸಲು ವಿಶೇಷ ಪ್ರಯತ್ನ ಮಾಡುವೆ : ಸುನೀಲ್‌ ಕುಮಾರ್‌ ವಾಗ್ದಾನ.

ಹೆಬ್ರಿ : ಹೆಬ್ರಿಯಲ್ಲಿ ಹಾದು ಹೋಗುವ 169- A ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಗಾಗಿ ಪಕ್ಕದಲ್ಲಿರುವ ಪ್ರಸಿದ್ಧ ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜಾಗವು ಹೋಗಲಿದ್ದು ಅನಂತಪದ್ಮನಾಭ ದೇವಾಲಯದ ವಾಸ್ತುವಿಗೆ ಯಾವುದೇ ತೊಂದರೆಯಾಗದಂತೆ ” ದೇವಸ್ಥಾನವನ್ನು ಉಳಿಸಿ ” ಎಂದು ಮಂಗಳವಾರ ಆಗಮಿಸಿದ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಅವರಿಗೆ ಆಡಳಿತ ಮೋಕ್ತೇಸರ ಹೆಬ್ರಿ ತಾರಾನಾಥ ಬಲ್ಲಾಳ್‌ ನೇತ್ರತ್ವದಲ್ಲಿ ಮನವಿ ಮಾಡಿಲಾಯಿತು.

ದೇವಸ್ಥಾನದ ಜಾಗವನ್ನು ಉಳಿಸಿಕೊಡಿ ಎಂದು ತಾರಾನಾಥ ಬಲ್ಲಾಳ್‌ ಕೇಳಿಕೊಂಡರು. ದೇವಸ್ಥಾನದ ಪರಿಸರ ವೀಕ್ಷಿಸಿದ ಶಾಸಕ ಸುನೀಲ್‌ ಕುಮಾರ್‌ ದೇವಸ್ಥಾನದ ವಾಣಿಜ್ಯ ಸಂಕೀರ್ಣದ ಹಿಂಬದಿಯ ಗೋಡೆಯ ವರೆಗೆ ಜಾಗವನ್ನು ಉಳಿಸಲು ವಿಶೇಷ ಪ್ರಯತ್ನ ಮಾಡುತ್ತೇನೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತಾಡಿದ್ದೇನೆ, ದೇವಸ್ಥಾನಕ್ಕೆ ಹಾನಿಯಾಗಂದತೆ ರಸ್ತೆಯನ್ನು ನಿರ್ಮಿಸುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ. ಮತ್ತೋಮ್ಮೆ ಮಾತನಾಡಿ ಮನವರಿಕೆ ಮಾಡುತ್ತೇನೆ ಎಂದು ವಾಗ್ದಾನ ನೀಡಿದರು. ಮುಖಂಡ ಹೆಬ್ರಿ ಭಾಸ್ಕರ ಜೋಯಿಸ್‌, ಉದ್ಯಮಿ ಭಾಲಕೃಷ್ಣ ನಾಯಕ್‌, ಹೆಬ್ರಿ ರಾಮಕೃಷ್ಣ ಆಚಾರ್ಯ, ಅರ್ಚಕ ರಾಮಕೃಷ್ಣ ಆಚಾರ್ಯ ಸೇರಿ ಹಲವರು ದೇವಸ್ಥಾನದ ಜಾಗವನ್ನು ಉಳಿಸುವ ವಿಚಾರದಲ್ಲಿ ಶಾಸಕರಿಗೆ ಮಾಹಿತಿ ನೀಡಿದರು. ಹಲವಾರು ಮಂದಿ ಭಕ್ತ ಸಮೂಹದವರು, ಹೆಬ್ರಿಯ ವಿವಿಧ ಪ್ರಮುಖರು, ಗಣ್ಯರು, ವಿವಿಧ ಬಿಜೆಪಿ ಪ್ರಮುಖರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments