Saturday, August 8, 2026
Homeಶಿವಪುರ ಗ್ರಾಮ ಪಂಚಾಯತ್‌ನಡೆದಾಡುವ ಭಜನಾ ಹರಿದಾಸ ಸೂರಿಮಣ್ಣು ಸದಾಶಿವ ಉಪಾಧ್ಯಾಯರಿಗೆ ಕಜಾನೆಯಲ್ಲಿ ಸನ್ಮಾನ.

ನಡೆದಾಡುವ ಭಜನಾ ಹರಿದಾಸ ಸೂರಿಮಣ್ಣು ಸದಾಶಿವ ಉಪಾಧ್ಯಾಯರಿಗೆ ಕಜಾನೆಯಲ್ಲಿ ಸನ್ಮಾನ.

ಶಿವಪುರ : ಕಜಾನೆ ಶ್ರೀ ಕೊಡಮಣಿತ್ತಾಯ ಕುಕ್ಕಿಂತಾಯ ದೈವಸ್ಥಾನದಲ್ಲಿ ನೂತನವಾಗಿ ಶುಭಾಂಭಗೊಂಡ ಶ್ರೀ ದುರ್ಗಾದೇವಿ ಭಜನಾ ಮಂಡಳಿಯ ಲೋಕಾರ್ಪಣೆಯ ಸಂಭ್ರಮದಲ್ಲಿ ಭಜನೆಗೆ ಹೊಸದಿಕ್ಕು ತೋರಿದ ಈಗಿನ ನಡೆದಾಡುವ ಭಜನಾ ಹರಿದಾಸ, ಭಜನಾ ಸೇವಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸೂರಿಮಣ್ಣು ಸದಾಶಿವ ಉಪಾಧ್ಯಾಯರನ್ನು ಸನ್ಮಾನಿಸಲಾಯಿತು.

ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಕಜಾನೆ ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನದ ಮೋಕ್ತೇಸರರಾದ ಭಜನಾ ಮಂಡಳಿಯ ಗೌರವಾಧ್ಯಕ್ಷ ನಟರಾಜ ಹೆಗ್ಡೆ, ಶ್ರೀಕಾಂತ್‌ ಶೆಟ್ಟಿ ಕಾರ್ಕಳ, ಕಾರ್ಕಳ ತಾಲ್ಲೂಕು ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಹರೀಶ ಹೆಗ್ಡೆ ಕಡ್ತಲ, ಹಿರಿಯರಾದ ಕಜಾನೆ ರಾಜು ಶೆಟ್ಟಿ, ಶ್ರೀದುರ್ಗಾದೇವಿ ಭಜನಾ ಮಂಡಳಿಯ ಅಧ್ಯಕ್ಷ ಯೋಗೀಶ ಶೆಟ್ಟಿ. ಕಾರ್ಯದರ್ಶಿ ಸುರೇಶ ನಾಯ್ಕ್‌, ಕೋಶಾಧಿಕಾರಿ ಗೀತಾ ಶೆಟ್ಟಿ ಕಜಾನೆ, ಕಜಾನೆಯ ವಿವಿಧ ಪ್ರಮುಖರು, ಗಣ್ಯರು, ಭಜನಾ ಮಂಡಳಿಯ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments