Sunday, August 9, 2026
Homeಕಾರ್ಕಳದರ್ಬುಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ : ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ಕೊಡುಗೆ...

ದರ್ಬುಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ : ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ಕೊಡುಗೆ ಹಸ್ತಾಂತರ

ಶಿಕ್ಷಣದ ಮಹತ್ವ ಅರಿತು ನೀಡುವ ಕೊಡುಗೆ ಮಹತ್ವದ್ದು : ಸುನೀಲ್‌ ಕುಮಾರ್‌ ಹೆಗ್ಡೆ.

ಕಡ್ತಲ : ದರ್ಬುಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳಿಂದ ಶಾಲಾ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ಕೊಡುಗೆ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ದಾನಿಗಳಾದ ದರ್ಬುಜೆ ಮೇಲ್ಬೇಟ್ಟು ಅನಿತಾ ಮತ್ತು ಸಂಜೀವ ನಾಯ್ಕ್ ದಂಪತಿಗಳು 10ಸಾವಿರ ಮೌಲ್ಯದ ಕೊಡುಗೆಯನ್ನು ನೀಡಿದರು.

ಕಡ್ತಲ ಗ್ರಾಮ ಪಂಚಾಯಿತಿ ನಿಕಟಪೂರ್ವ ಸದಸ್ಯರಾದ ಕಡ್ತಲ ಸಿರಿಬೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರ ಸುನಿಲ್ ಕುಮಾರ್ ಹೆಗಡೆ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಣದ ಮಹತ್ವವನ್ನು ಅರಿತಿರುವುದರಿಂದ ಇಂತಹ ಕೊಡುಗೆಯನ್ನು ನೀಡಿದ್ದಾರೆ ಹಾಗೂ ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುವ ಇಂತಹ ಕೊಡುಗೆಗಳು ಹೆಚ್ಚಿನ ಮಹತ್ವದ ಹಾಗೂ ಅನುಕರಣೀಯ ಕಾರ್ಯವಾಗಿದೆ ಎಂದು ದಾನಿಗಳನ್ನು ಶ್ಲಾಘಿಸಿ ಅಭಿನಂದಿಸಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಇಂದಿರಾ ನಾಯ್ಕ್, ದಾನಿಗಳಾದ ಸಂಜೀವ ನಾಯ್ಕ್, ಅಂಗನವಾಡಿ ಸಹಾಯಕಿ ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಸತೀಶ್ಚಂದ್ರ ಬಾಬು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ರಚನಾ ನಿರೂಪಿಸಿ ಶಿಕ್ಷಕಿ ಮಂಜುಳಾ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments