Sunday, August 9, 2026
Homeಪ್ರಚಲಿತಅಜೆಕಾರಿನಲ್ಲಿ ಆನ್ ಲೈನ್ ವಂಚನೆ - ದೂರು ದಾಖಲು.

ಅಜೆಕಾರಿನಲ್ಲಿ ಆನ್ ಲೈನ್ ವಂಚನೆ – ದೂರು ದಾಖಲು.

ಪೆನ್ಷನ್ ಹೆಸರಿನಲ್ಲಿ ಹಣ ಲೂಟಿ.

ಅಜೆಕಾರು : ಜುಲೈ 13 ರಂದು ಸಂಜೆ ಸುಮಾರು 5:30 ಗಂಟೆಗೆ ಶಂಕರ ಆರ್‌ ಹೆಗ್ಡೆ (66) ಮರ್ಣೆ ಗ್ರಾಮ, ಕಾರ್ಕಳ ಇವರು ಮನೆಯಲ್ಲಿರುವಾಗ ಅವರ ಫೇಸ್‌ ಬುಕ್‌ ಖಾತೆಗೆ ಕೆನರಾ ರಿಟೈರ್ಡ್‌ ಪೆನ್ಸನ್‌ ಕಾರ್ಡ್‌ ಎಂಬ ಖಾತೆಯಿಂದ ಲಿಂಕನ್ನು ಕಳುಹಿಸಿದ್ದು, ಶಂಕರ ಹೆಗ್ಡೆಯವರು ಲಿಂಕನ್ನು ತೆರೆದು ಅದರಲ್ಲಿ ರಿಟೈರ್ಡ್‌ ಪೆನ್ಸನ್‌ ಕಾರ್ಡ್‌ ಬಗ್ಗೆ ಆಪ್ಲೈ ಕೊಟ್ಟಿದ್ದು, ಆ ಸಮಯ 6744250286, 8655389531,6744250286 ನಂಬರಿನಿಂದ ಕರೆ ಮಾಡಿ ತಾನು ಬ್ಯಾಂಕಿನ ಮುಖ್ಯಸ್ಥ (ಎ.ಜಿ.ಎಮ್) ಮಾತನಾಡುವುದಾಗಿ ಹೇಳಿ ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗಿದೆ ಎಂದು ಹೇಳಿ ರಿಟೈರ್ಡ್‌ ಪೆನ್ಸನ್‌ ಕಾರ್ಡ್‌ ನ ಲಾಭದ ಬಗ್ಗೆ ಮಾಹಿತಿ ನೀಡಿ ‌ಆಪ್‌ ಕಳುಹಿಸುವ ಮೂಲಕ ಡೆಬಿಟ್‌ ಕಾರ್ಡ್‌ ನಂಬ್ರ, ಪಿನ್‌ ನಂಬ್ರ ಹಾಗೂ ಇತರ ವೈಯುಕ್ತಿಕ ಮಾಹಿತಿಯನ್ನು ಪಡೆದು, ಖಾತೆಯಿಂದ ರೂ 1,24,000/- ಮತ್ತು ಕ್ರೆಡಿಟ್ ಕಾರ್ಡ್‌ ನಿಂದ ರೂ 2,49,000/- ರೂ‌ ಒಟ್ಟು ರೂ 3,73,000/- ವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿರುತ್ತಾರೆ.

ಫೇಸ್ಬುಕ್ ಜಾಲತಾಣ ವೆಬ್‌ಸೈಟ್ ಗಳನ್ನು ದುರ್ಬಳಕೆ ಮಾಡಿಕೊಂಡು ಅನುಮತಿ ಇಲ್ಲದೆ ವೈಯುಕ್ತಿಕ ವಿವರಗಳನ್ನು ಬಳಸಿಕೊಂಡು ಮೋಸ ಮತ್ತು ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 24/2026 ಕಲಂ: 319(2), 318(4)BNS ಮತ್ತು 66 (C), 66 (D) INFORMATION TECHNOLOGY ACT ರಂತೆ ಪ್ರಕರಣ ದಾಖಲಾಗಿರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments