Saturday, August 8, 2026
Homeಹೆಬ್ರಿಹೆಬ್ರಿ ವಲಯದ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮ.

ಹೆಬ್ರಿ ವಲಯದ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮ.

ಹೆಬ್ರಿ : ಹೆಬ್ರಿ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ವಲಯದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆಯುವ ಹೊಲಿಗೆ ತರಬೇತಿ ಕಾರ್ಯಕ್ರವನ್ನು ಜನ ಜಾಗ್ರತಿ ವೇದಿಕೆಯ ಹೆಬ್ರಿ ತಾಲ್ಲೂಕು ಅಧ್ಯಕ್ಷ ಎಚ್. ವಾದಿರಾಜ ಶೆಟ್ಟಿ ಉದ್ಘಾಟಿಸಿದರು.

ಮಹಿಳೆಯರು ಸ್ವಾವಲಂಬನೆಯಿಂದ ಬದುಕು ಕಟ್ಟಿ ಕೊಳ್ಳಲು ಟೈಲರಿಂಗ್ ಉದ್ಯಮ ಉತ್ತಮ ಉದ್ಯೋಗವಾಗಿದ್ದು ತರಬೇತಿಯಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಳ್ಳುವಂತೆ ವಾದಿರಾಜ ಶೆಟ್ಟಿ ತಿಳಿಸಿದರು. ಯೋಜನೆಯ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ, ಸ್ವಉದ್ಯೋಗಕ್ಕೆ ಹೆಚ್ಚಿನ ಮಹತ್ವವನ್ನು ಯೋಜನೆಯು ನೀಡಿದೆ. ಟೈಲರಿಂಗ್ ಉದ್ಯಮ ಮನೆಯಲ್ಲಿಯೇ ಕುಳಿತು ಮಾಡಬಹುದಾದ ಒಂದು ಉತ್ತಮ ಉದ್ಯೋಗವಾಗಿದ್ದು ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೆ ಮಾತ್ರಶ್ರೀ ಹೇಮಾವತಿ ಅಮ್ಮನವರು ನೀಡಿರುವ ಉತ್ತಮ ಅವಕಾಶವಾಗಿದ್ದು 3 ತಿಂಗಳ ಕಾಲ ನಡೆಯುವ ತರಬೇತಿಯಲ್ಲಿ ಉತ್ತಮ ರೀತಿಯಲ್ಲಿ ಬಾಗವಹಿಸಿ ತಮ್ಮ ಬದುಕು ಕಟ್ಟಿಕೊಳ್ಳುವಂತೆ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ರೇಷ್ಮಾ ಮಾಹಿತಿ ಮಾರ್ಗದರ್ಶನ ನೀಡಿದರು. ಉದ್ಯಮಿ ಎಚ್. ನರೇಂದ್ರ ನಾಯಕ್ ಯೋಜನೆಯ ಹಲವು ಕಾರ್ಯಕ್ರಮಗಳ ಬಗ್ಗೆ ಜ್ಞಾನ ವಿಕಾಸದ ಉದ್ದೇಶ ಗುರಿ ಮತ್ತು ಮಹಿಳೆಯರ ಸ್ವಾವಲಂಬಿ ಯಾಗಿ ಬದುಕಲು ಜ್ಞಾನವಿಕಾಸ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು. ತರಬೇತಿ ಶಿಕ್ಷಕಿ ಶ್ಯಾಮಲ ತರಬೇತಿ ಪಡೆಯುವ ಪರಿಕರಗಳ ಬಗ್ಗೆ ತಿಳಿಸಿದರು.

ಜನಜಾಗೃತಿ ವೇದಿಕೆಯ ವಲಯ ಸದಸ್ಯ ಹರೀಶ್ ಪೂಜಾರಿ, ವಲಯ ಅಧ್ಯಕ್ಷೆ ಶಾಲಿನಿ ಭಂಡಾರಿ, ಸೇವಾ ಪ್ರತಿನಿಧಿ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಜ್ಞಾನವಿಕಾಸಮನ್ವಯ ಅಧಿಕಾರಿ ಚಂದ್ರಾವತಿ ನಿರೂಪಿಸಿದರು. ವಲಯ ಮೇಲ್ವಿಚಾರಕ ಉದಯ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಕಾಂತಿ ಹೆಗಡೆ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments