Wednesday, August 19, 2026
Homeಬೆಳ್ವೆ ಗ್ರಾಮ ಪಂಚಾಯತ್‌ಅಲ್ಬಾಡಿ ಆರ್ಡಿ ಶಾಲೆಯ ವಿದ್ಯಾರ್ಥಿಗಳಿಗೆ ಗುರುತು ಪತ್ರ ವಿತರಣೆ.

ಅಲ್ಬಾಡಿ ಆರ್ಡಿ ಶಾಲೆಯ ವಿದ್ಯಾರ್ಥಿಗಳಿಗೆ ಗುರುತು ಪತ್ರ ವಿತರಣೆ.

ಬೆಳ್ವೆ : ಟೀಮ್ ಮಲೆನಾಡು ಹ್ಯೂಮೇನಿಟೆರಿಯನ್ ಟ್ರಸ್ಟ್ (ರಿ) ಬೆಳ್ವೆ ಹೆಬ್ರಿ ತಾಲ್ಲೂಕು ಹಾಗೂ ಲಯನ್ಸ್ ಕ್ಲಬ್ ಬೆಳ್ವೆ ಆರ್ಡಿ ಗೋಳಿಯಂಗಡಿ ಇದರ ಆಶ್ರಯದಲ್ಲಿ ಹೆಬ್ರಿ ತಾಲ್ಲೂಕು ಅಲ್ಬಾಡಿ ಆರ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ” ಗುರುತು ಪತ್ರ ” ವಿತರಣ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.

ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ಉಷಾ ವಹಿಸಿದ್ದರು. ಟೀಮ್ ಮಲೆನಾಡು ಹ್ಯೂಮೇನಿಟೆರಿಯನ್ ಟ್ರಸ್ಟ್ ಬೆಳ್ವೆ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ವಿದ್ಯಾರ್ಥಿಗಳಿಗೆ ಗುರುತು ಪತ್ರ ವಿತರಿಸಿದರು. ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ ಅಧ್ಯಕ್ಷೆ ಚಂದ್ರಿಕಾ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಪಟ್ಟಾಬಿ ರಾಮ್ ಭಟ್, ಟೀಮ್ ಮಲೆನಾಡು ಹ್ಯೂಮೇನಿಟೆರಿಯನ್ ಟ್ರಸ್ಟ್ ಬೆಳ್ವೆ ಉಪಾಧ್ಯಕ್ಷ ಅಬ್ದುಲ್ ಶುಕುರ್ ಬೆಳ್ವೆ, ಲಯನ್ಸ್ ಕ್ಲಬ್ ಸಂಘಟಕ ಪತ್ರಕರ್ತ ಸಂಜೀವ ಆರ್ಡಿ, ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಕೃಷ್ಣ ನಾಯ್ಕ ಉಪಸ್ಥಿರಿದ್ದರು. ಮುಖ್ಯ ಶಿಕ್ಷಕಿ ಯಶೋಧ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments