Wednesday, August 19, 2026
Homeಹೆಬ್ರಿಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಭಾರತೀಯ ಪರಂಪರೆಯಲ್ಲಿ ಸಾಧಕರು ವಿಶೇಷ...

ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಭಾರತೀಯ ಪರಂಪರೆಯಲ್ಲಿ ಸಾಧಕರು ವಿಶೇಷ ಕಾರ್ಯಕ್ರಮ.

ಹೆಬ್ರಿ : ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಭಾರತೀಯ ಪರಂಪರೆಯಲ್ಲಿ ಸಾಧಕರು ಎಂಬ ವಿಷಯ‌ ಕಾರ್ಯಕ್ರಮ ನಡೆಯಿತು. ಕರ್ನಾಟಕ ದಕ್ಷಿಣ ಪ್ರಾಂತದ ಬೌಧ್ಧಿಕ್ ಪ್ರಮುಖ್ ಕೃಷ್ಣಪ್ರಸಾದ್ ಬದಿ ಮಾತನಾಡಿ ದೇಶದ ಒಂದೊಂದು ಪರ್ವತದಲ್ಲಿರುವ ಪವಿತ್ರತೆ ಮತ್ತು ಪ್ರತೀ ನದಿ ಪಾತ್ರದಲ್ಲಿರುವ ಸಂಸ್ಕ್ರತಿಯನ್ನು ತಿಳಿಯುತ್ತಾ ಹೋದಾಗ ನಮ್ಮ ದೇಶಾಭಿಮಾನ ನೂರ್ಮಡಿಯಾಗುತ್ತದೆ ಎಂದರು. ಪರಂಪರೆಯಲ್ಲಿ ದೇಶದ ಕೀರ್ತಿಯನ್ನು ಬೆಳಗಿದ ಶ್ರೇಷ್ಠ ಗಣಿತಶಾಸ್ತ್ರಜ್ಞರನ್ನು, ವೈದ್ಯರನ್ನು ಮತ್ತು ವಿಜ್ಞಾನಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಉಡುಪಿ ಜಿಲ್ಲಾ ಸ್ವಯಂಸೇವಾ ಸಂಘುದ ಪ್ರಚಾರಕ ಅವಿನಾಶ್, ದೀಪಕ್ ಭಾಗಿಯಾದರು. ಟ್ರಸ್ಟ್ ಹಿರಿಯ ಸದಸ್ಯ ಬಾಲಕೃಷ್ಣ ಮಲ್ಯ, ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹಂಸಿನಿ ಪ್ರಾರ್ಥಿಸಿದರು, ಸಂಖ್ಯಾಶಾಸ್ತ್ರದ ಉಪನ್ಯಾಸಕ ಚಂದ್ರಹಾಸ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments