Wednesday, August 19, 2026
Homeಬೆಳ್ವೆ ಗ್ರಾಮ ಪಂಚಾಯತ್‌ಬೆಳ್ವೆ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯ ದಿನಾಚರಣೆ

ಬೆಳ್ವೆ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯ ದಿನಾಚರಣೆ

ಬೆಳ್ವೆ : ಇಸ್ಲಾಮಿಕ್ ಯೂತ್ ಫೆಡರೇಶನ್ ಬೆಳ್ವೆ ಇವರ ಆಶ್ರದಯದಲ್ಲಿ ಬೆಳ್ವೆ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ 80ನೇ ಸ್ವಾಂತಂತ್ರ ದಿನಾಚರಣೆ ನಡೆಯಿತು. ಸ್ಥಳೀಯ ಉದ್ಯಮಿ ಇಬ್ರಾಹಿಂ ಸಾಹೇಬ್ ಹೊನಕಲ್ ಧ್ವಜಾರೋಹಣ ನೆರವೇರಿಸಿದರು.

ಅಧ್ಯಕ್ಷತೆಯನ್ನು ಇಸ್ಲಾಮಿಕ್ ಯೂತ್ ಫೆಡರೇಶನ್ ಅಧ್ಯಕ್ಷ ಮೊಹಮ್ಮದ್ ನಜೀರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ವೆ ಜುಮ್ಮಾ ಮಸೀದಿ ಖತೀಬ್ ಮೌಲಾನಾ ಮೊಹಮ್ಮದ್ ರಫೀಕ್ ಶುಭಾಶಂಸನೆಗೈದರು. ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ, ಇಸ್ಲಾಮಿಕ್ ಯೂತ್ ಫೆಡರೇಶನ್ ಉಪಾಧ್ಯಕ್ಷ ಶಾಝಾದ್ ಬೆಳ್ವೆ , ಹಿದಾಯತುಲ್ ಉಲೂಮ್ ಅರಬಿ ಮದ್ರಸ ಸಮಿತಿ ಉಪಾಧ್ಯಕ್ಷ ಅಬ್ದುಲ್ಲಾ ಸಾಹೇಬ್,ಜುಮ್ಮಾ ಮಸೀದಿ ಬೆಳ್ವೆ ಕೋಶಾಧಿಕಾರಿ ಅನ್ಸಾರ್ ಬ್ಯಾರಿ ಹಾಗೂ ಜಮಾತ್ ಭಾಂದವರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ರಾಷ್ಟ್ರಗೀತೇ ಹಾಡಿದರು. ಜಾಸೀಂ ಸ್ವಾಗತಿಸಿ ವಂದಿಸಿದರು. ಮೊಹಮ್ಮದ್ ರಬಿ ಕಾರ್ಯಕ್ರಮ ನಿರೂಪಿಸಿದರು .

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments