ಅಜೆಕಾರು : ಅಜೆಕಾರು ಗುಡ್ಡೆಅಂಗಡಿ ಹರಿವಾಯು ಕೃಪಾದಲ್ಲಿ ಸೌರ ಋಗುಪಾಕರ್ಮವು ವಿದ್ವಾನ್ ರಾಘವೇಂದ್ರ ಭಟ್ ಗುಡ್ಡೆಅಂಗಡಿಯವರ ನೇತೃತ್ವದಲ್ಲಿ, ವೇದಮೂರ್ತಿ ಹೆಬ್ರಿ ಶಿಶಿರ ಜೋಯಿಸ್ ಪೌರೋಹಿತ್ಯದಲ್ಲಿ ಬುಧವಾರ ನಡೆಯಿತು. ಅಜೆಕಾರು ಆಸುಪಾಸಿನ ಹಲವಾರು ವಿಪ್ರರು ಪಾಲ್ಗೊಂಡರು. ವಿದ್ವಾನ್ ಬಲ್ಲಾಡಿ ವೇದವ್ಯಾಸ ಭಟ್ ಸಹಕರಿಸಿದರು.



