ಹೆಬ್ರಿ : ಹೆಬ್ರಿ ತಾಲ್ಲೂಕು ಕಚೇರಿಗೆ ಗುರುವಾರ ಲೋಕಾಯುಕ್ತ ಡಿವೈಎಸ್ ಪಿ ಹಾಲಮೂರ್ತಿ ನೇತ್ರತ್ವದ ತಂಡ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಕಿ ಇರುವ ಹಳೆಯ ಕಡತಗಳನ್ನು ತಂಡವು ಪರಿಶೀಲನೆ ನಡೆಸುತ್ತಿದೆ. ಪರಿಶೀಲನೆಯ ಬಳಿಕ ಸಂಜೆಯ ಹೊತ್ತಿಗೆ ಸಮಗ್ರ ಮಾಹಿತಿಯನ್ನು ಲೋಕಾಯುಕ್ತ ಎಸ್ ಪಿ ಕಚೇರಿ ನೀಡಲಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.





