ಮಡಾಮಕ್ಕಿ : ಆಸರೆ ಯುವವೃಂದ (ರಿ) ಮಡಾಮಕ್ಕಿ ಇವರ ವತಿಯಿಂದ ಆಗೇಡಿ ಗೌಜ್ ಆಸಾಡಿ ಗಮ್ಮತ್ ಈ ಕಾರ್ಯಕ್ರಮದಲ್ಲಿ ಆಯೋಜಿಸಿದ
ಲಕ್ಕಿ ಡಿಪ್ ನಲ್ಲಿ ಬಂದಂತಹ ಮೊತ್ತವನ್ನು ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ 1ವರ್ಷದ
ಆರ್ವಿ ಎಂಬ ಪುಟ್ಟ ಹೆಣ್ಣು ಮಗುವಿನ ಅನಾರೋಗ್ಯದ ವೆಚ್ಚಕ್ಕೆ ನೀಡಲಾಗಿದೆ.
ಆಸರೆ ಯುವವೃಂದ (ರಿ) ಮಡಾಮಕ್ಕಿ ತಂಡವು ಭೇಟಿ ಮಾಡಿ ಮಗುವಿನ ಆರೋಗ್ಯ ವಿಚಾರಿಸಿ ,ಚೆಕ್ ಮುಖಾಂತರ ಮೊತ್ತವನ್ನು ಹಸ್ತಾಂತರಿಸಲಾಯಿತು.
ಅಧ್ಯಕ್ಷ ಮುರಳಿಧರ ಹೆಗ್ಡೆ, ಸಂಚಾಲಕ ರಾಜೇಶ್ ಪೂಜಾರಿ, ನರೇಶ್ ಹಾಗೂ ಸಂದೇಶ್ ಉಪಸ್ಥಿತರಿದ್ದರು



