ಕೃತಿ ಲೋಕಾರ್ಪಣೆಗೆ ಸಹಕಾರ ಮಾಡಿದ ಪಡುಕುಡೂರು ಪಡುಪರ್ಕಳ ಹರೀಶ್ ಶೆಟ್ಟಿ ಮತ್ತು ಪಡುಕುಡೂರು ಅರುಣ್ ಎಸ್ ಶೆಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಪ್ರಪುಲ್ಲ ದಿನೇಶ್ ಶೆಟ್ಟಿ.
ಮುಂಬಯಿ : ಪಡುಕುಡೂರಿನ ಪ್ರತಿಭೆ ಕವಯತ್ರಿ, ತುಳು ಸಾಹಿತ್ಯ ಲೋಕಕ್ಕೆ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿರುವ ಪ್ರಪುಲ್ಲ ದಿನೇಶ್ ಶೆಟ್ಟಿ ಮುಂಬಯಿ ಅವರ ” ಪೊಲ್ಲಕ್ಕನ ಅಜಕೆ ” ಕೃತಿ ಲೋಕಾರ್ಪಣೆ ನಡೆಯಿತು.
ಪಡುಕುಡೂರು ಶಾಲೆಯ ಪ್ರತಿಭಾನ್ವಿತ ಹಿರಿಯ ವಿದ್ಯಾರ್ಥಿಯಾಗಿರುವ ಪ್ರಪುಲ್ಲ ಶೆಟ್ಟಿಯವರು ಮುಂಬಯಿಯಲ್ಲಿ ನೆಲೆಸಿದ್ದು ಹುಟ್ಟೂರಿನ ಹೆಸರಿಗೆ ಕರ್ಮ ಭೂಮಿ ಮುಂಬಯಿಯಲ್ಲಿ ರಾರಾಜಿಸುವಂತೆ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡುತ್ತ ತುಲುವೆರೆ ಕಲ ಬೊಂಬೈ ಎಗ್ಗೆಯ ಮೂಲಕ ಸೇವೆಯಲ್ಲಿ ನಿರತರಾಗಿದ್ದಾರೆ.
ಅದಿತ್ಯವಾರ ಬೊಂಬಾಯಿಯ ಡೊಂಬಿವಿಲಿ ಪ್ರೀತಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ತುಲುವೆರೆ ಕಲ ಮುಂಬೈ ವಲಯದ ಪ್ರಥಮ ವರ್ಷದ ವಾರ್ಷಿಕೋತ್ಸವ “ತುಲುವೆರೆ ಕಲತೋಚ್ಚಯ” ಕಾರ್ಯಕ್ರಮದ ಸಂಭ್ರಮದಲ್ಲಿ ಕೃತಿ ಲೋಕಾರ್ಪಣೆ ಗೊಂಡಿದೆ.
ಕೃತಿ ಲೋಕಾರ್ಪಣೆಗೆ ವಿಶೇಷ ಸಹಕಾರ ನೀಡಿದ ಮುಂಬೈ ಉದ್ಯಮಿಗಳಾದ ಪಡುಕುಡೂರು ಪಡುಪರ್ಕಳ ಹರೀಶ್ ಶೆಟ್ಟಿ ಮತ್ತು ಅರುಣ್ ಎಸ್ ಶೆಟ್ಟಿ ಅವರಿಗೆ ಪ್ರಪುಲ್ಲ ದಿನೇಶ್ ಶೆಟ್ಟಿಯವರು ಕೃತಜ್ಞತೆ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕವಿ ಪ್ರಪುಲ್ಲ ದಿನೇಶ್ ಶೆಟ್ಟಿ ದಂಪತಿ ಮತ್ತು ಪುತ್ರನನ್ನು ಗೌರವಿಸಲಾಯಿತು.




