ವಾರಿಜ ನಾಯಕ್ ಅವರಿಗೆ ಹೊಸ ಮನೆ ಮಂಜೂರು: ಭೂಮಿ ಪೂಜೆ.
ಹೆಬ್ರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಹೆಬ್ರಿ ತಾಲ್ಲೂಕು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಪರಮಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ ಹೇಮಾವತಿ ವಿ ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಹೆಬ್ರಿ ತಾಲ್ಲೂಕಿನ ಮಾಶಾಸನ ಫಲಾನುಭವಿ ವಾರಿಜ ನಾಯಕ್ ಅವರಿಗೆ ಹೊಸ ಮನೆ ಮಂಜೂರಾಗಿದ್ದು ಭೂಮಿ ಪೂಜೆಯನ್ನು ಅರ್ಚಕ ನಾಗರಾಜ ಜೋಯಿಸ್ ನೆರವೇರಿಸಿದರು.
ಹೆಬ್ರಿ ತಾಲ್ಲೂಕಿನ ಯೋಜನಾಧಿಕಾರಿ ರೇಷ್ಮಾ ವಾತ್ಸಲ್ಯ ಕಾರ್ಯಕ್ರಮದ ಮಾಹಿತಿ ನೀಡಿದರು. ಹೆಬ್ರಿ ತಾಲ್ಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ವಾದಿರಾಜ ಶೆಟ್ಟಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ ನಡೆಯುವ ಇಂತಹ ಕಾರ್ಯಕ್ರಮ ಬಡ ಕುಟುಂಬಗಳಿಗೆ ತುಂಬಾ ಪ್ರಯೋಜನವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನರೇಂದ್ರ ನಾಯಕ್, ಹರೀಶ್ ಪೂಜಾರಿ, ಪ್ರಸಾದ್ ಭಂಡಾರಿ, ಸುರೇಶ್ ಭಂಡಾರಿ, ಜನಾರ್ಧನ್ ಎಚ್, ಜ್ಯೋತಿ ಉದಯ್ ಕುಮಾರ್, ಶಾಲಿನಿ ಭಂಡಾರಿ, ಗಣೇಶ್ ಇಂಜಿನಿಯರ್, ಸುಧಾಕರ್ ಕನ್ಯಾನ, ಸಂತೋಷ್ ನಾಯಕ್, ಅರುಣ್, ಪತ್ರಕರ್ತೆ ಸುಮಲತಾ, ಮೇಲ್ವಿಚಾರಕ ಉದಯ್ ಕುಲಾಲ್, ಸಮನ್ವಯ ಅಧಿಕಾರಿ ಚಂದ್ರವತಿ, ಸೇವಾ ಪ್ರತಿನಿಧಿ ಕಾಂತಿ ಹೆಗ್ಡೆ ಉಪಸ್ಥಿತರಿದ್ದರು.





