Thursday, September 24, 2026
Homeಹೆಬ್ರಿವಿಂಗ್‌ ಕಮಾಂಡರ್‌ ಅನಿಲ್‌ ರಾಜ್‌ ಅವರಿಗೆ ತವರೂರು ಪೆರ್ಡೂರಿನಲ್ಲಿ ಭವ್ಯಸ್ವಾಗತ : ಸಾರ್ವಜನಿಕ ಅಭಿನಂದನೆ.

ವಿಂಗ್‌ ಕಮಾಂಡರ್‌ ಅನಿಲ್‌ ರಾಜ್‌ ಅವರಿಗೆ ತವರೂರು ಪೆರ್ಡೂರಿನಲ್ಲಿ ಭವ್ಯಸ್ವಾಗತ : ಸಾರ್ವಜನಿಕ ಅಭಿನಂದನೆ.

ಅನಿಲ್ ರಾಜ್ ಪೆರ್ಡೂರಿನ ಹೆಮ್ಮೆ : ಶಾಂತಾರಾಮ ಸೂಡ.

ಪೆರ್ಡೂರು : ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಗುರುವಾರ ತವರೂರು ಪೆರ್ಡೂರಿಗೆ ಆಗಮಿಸಿದ ವಿಂಗ್‌ ಕಮಾಂಡರ್‌ ಅನಿಲ್‌ ರಾಜ್‌ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.

ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ವಿಂಗ್ ಕಮಾಂಡರ್ ಅನಿಲ್ ರಾಜ್ ಮತ್ತು ಕಾವ್ಯ ಅನಿಲ್ ರಾಜ್ ದಂಪತಿಗಳನ್ನು ಸ್ವಾಗತಿಸಿ ಪೂರ್ಣಕುಂಭ ಸ್ವಾಗತಿಸಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಗೌರವಿಸಲಾಯಿತು.

ಬಳಿಕ ತೆರೆದ ವಾಹನದಲ್ಲಿ ಅನಿಲ್ ರಾಜ್ ಮತ್ತು ಕಾವ್ಯ ಅನಿಲ್ ರಾಜ್ ದಂಪತಿಗಳು, ಅನಂದ ಗೌಡ, ಲಲಿತಾಂಬ ದಂಪತಿಗಳನ್ನು ರಥಬೀಧಿಯಲ್ಲಿ ಭವ್ಯ ಮೆರವಣಿಗೆಯ ಮೂಲಕ ಕರೆತರಲಾಯಿತು.
ನೂರಾರು ಜನ ಸೇರಿ ವಿಂಗ್ ಕಮಾಂಡರ್ ಅನಿಲ್ ರಾಜ್ ಅವರನ್ನು ಗೌರವಿಸಿದರು.. ಊರಿನ ಗೌರವಾನ್ವಿತ ನಾಗರಿಕರ ಸ್ವಾಗತ ಸಂಭ್ರಮಕ್ಕೆ ಸಾಕ್ಷಿಯಾದರು.

ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ. ಸೀನಿಯರ್‌ ಛೇಂಬರ್‌ ಇಂಟರ್‌ ನ್ಯಾಷನಲ್‌ ಅನಂತಸ್ಪರ್ಷ ಲೀಜನ್‌ ಪೆರ್ಡೂರು ವತಿಯಿಂದ ಸುಬ್ರಾಯ ಕಲ್ಯಾಣ ಮಂಟಪದಲ್ಲಿ ವಿಂಗ್‌ ಕಮಾಂಡರ್‌ ಅನಿಲ್‌ ರಾಜ್‌ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಯಿತು.

ಸೀನಿಯರ್‌ ಛೇಂಬರ್‌ ಇಂಟರ್‌ ನ್ಯಾಷನಲ್‌ ಅನಂತಸ್ಪರ್ಷ ಲೀಜನ್‌ ಪೆರ್ಡೂರು ಅಧ್ಯಕ್ಷ ಅನಿಲ್ ರಾಜ್ ತಂದೆ ಆನಂದ ಗೌಡ ಅಧ್ಯಕ್ಷತೆ ವಹಿಸಿ ಇದು ನನ್ನ ಜೀವನದ ಭಾಗ್ಯದ ಜೊತೆಗೆ ಸಂಭ್ರಮ, ಮಗನಿಗೆ ಅಭಿನಂದಿಸಿ ಹರಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ಶಾಂತಾರಾಮ ಸೂಡ ಮಾತನಾಡಿ ನಮ್ಮ ನಡುವೆ ಬೆಳೆದ ಹುಡುಗ ವಿಂಗ್ ಕಮಾಂಡರ್ ಅನಿಲ್ ರಾಜ್ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ನಮ್ಮೂರು ಪೆರ್ಡೂರಿಗೆ ಹೆಮ್ಮೆ ತಂದಿದ್ದಾರೆ. ಅವರ ಕಠಿಣ ಪರಿಶ್ರಮದ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು. ದೇಶಕ್ಕೆ ದೊಡ್ಡ ಕೊಡುಗೆ ನೀಡಬೇಕು, ಆಗ ಊರಿಗೂ ಹೆಸರು ಬರುತ್ತದೆ, ಅನಿಲ್ ರಾಜ್ ಭವಿಷ್ಯ ಇನ್ನೂ ಉಜ್ವಲವಾಗಲಿ ಎಂದು ಹಾರೈಸಿದರು.

ಸೀನಿಯರ್‌ ಛೇಂಬರ್‌ ಇಂಟರ್‌ ನ್ಯಾಷನಲ್‌ ರಾಷ್ಟ್ರೀಯ ಪೂರ್ವಾಧ್ಯಕ್ಷ ಚಿತ್ರ ಕುಮಾರ್‌ ಮಾತನಾಡಿ ಅನಿಲ್ ರಾಜ್ ಅವರಿಂದ ಆಕರ್ಷಿತರಾಗಿ ಯುವ ಸಮುದಾಯದ ಸೇನೆ ಸೇರುವಂತಾಗಬೇಕು, ಅದಕ್ಕಾಗಿ ನಮ್ಮ ಸಂಸ್ಥೆಯ ಮೂಲಕ‌ ಮಿಲಿಟರಿ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶ ಇದೆ ಎಂದರು.

ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ
ಅರ್ಚಕ ರಘುಪ್ರಸಾದ್‌ ಅಡಿಗ ಮಾತನಾಡಿ ತಂದೆ ತಾಯಿಯ ತ್ಯಾಗ ಪರಿಶ್ರಮ ಪುಣ್ಯದ ಫಲದಿಂದ ಅನಿಲ್ ರಾಜ್ ಸಾಧನೆ ಮಾಡಿ ಪೆರ್ಡೂರಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.

ವಿಂಗ್ ಕಮಾಂಡರ್ ಅನಿಲ್ ರಾಜ್ ಹುಟ್ಟೂರ ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿ ನನಗೆ ನಮ್ಮೂರಿನಲ್ಲಿ ಸಿಕ್ಕ ಸ್ವಾಗತ, ಭಾವಪೂರ್ಣ ಗೌರವದಿಂದ ಮನಸ್ಸು ತುಂಬಿ ಬಂದಿದೆ. ಊರಿನ ಗೌರವ ಅತ್ಯಂತ ಶ್ರೇಷ್ಠ ಮತ್ತು ಹೆಮ್ಮೆ, ನನಗೆ ನೀಡಿದ ಅದು ಎಲ್ಲರಿಗೂ ಸೇರಿದ ಗೌರವವಾಗಿದೆ. ಜೀವನದಲ್ಲಿ ತಂದೆ ತಾಯಿ, ಗುರುಗಳು, ಊರವರು, ಕುಟುಂಬದವರು, ಆತ್ಮೀಯರು ಸೇರಿ ಎಲ್ಲರ ಸಹಕಾರದಿಂದ ಸಾಧನೆ ಮಾಡುವಂತಾಗಿದೆ. ನಾವು ಕನಸಿನ ಜೊತೆ ದೊಡ್ಡ ಗುರಿಯನ್ನು ಹೊಂದಿ ಪ್ರಯತ್ನ ಪಟ್ಟಾಗ ಯಶಸ್ಸು ದೊರೆಯುತ್ತದೆ. ಪ್ರಯತ್ನ ನಿರಂತರವಾಗಬೇಕು, ಇನ್ನಷ್ಟು ಸೇವೆಯನ್ನು ಸಮಾಜಕ್ಕೆ ನೀಡಲು ಸಿದ್ಧನಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು.

ಅನಿಲ್ ರಾಜ್ ಅವರ ಗುರುಗಳಾದ ಎಪಿಟಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ವಿಠ್ಠಲ ಪೈ, ರೇವತಿ ಟೀಚರ್ ಅವರನ್ನು ಅನಿಲ್ ರಾಜ್ ಗೌರವಿಸಿದರು.

ಉಡುಪಿ ಜಿಲ್ಲಾ ಒಕ್ಕಲಿಗರ ಸಂಘ, ಮಾಜಿ ಸೈನಿಕರ ಸಂಘ, ಪೆರ್ಡೂರಿನ ವಿವಿಧ ಸಂಘ ಸಂಸ್ಥೆಗಳು, ಅಭಿಮಾನಿಗಳು, ಕುಟುಂಬಸ್ಥರು, ಅಧಿಕಾರಿಗಳು, ಊರಿನ ಪ್ರಮುಖರು ಅನಿಲ್ ರಾಜ್ ಮತ್ತು ಪತ್ನಿ ಕಾವ್ಯ ಅನಿಲ್ ರಾಜ್ ಅವರನ್ನು ಗೌರವಿಸಿದರು. ಅನಿಲ್ ರಾಜ್ ಅವರ ತಾಯಿ ಲಲಿತಾಂಬ ಮಗ ಅನಿಲ್ ರಾಜ್ ಸಾಧನೆಯ ಹಿಂದಿನ ಶ್ರಮವನ್ನು ಸ್ಮರಿಸಿ ಸಮಾಜದಲ್ಲಿ ನಮ್ಮ ಕುಟುಂಬದ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಸ್ಮರಿಸಿದರು.

ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಮೋದ್‌ ರೈ ಪಳಜೆ, ಸೀನಿಯರ್‌ ಛೇಂಬರ್‌ ಇಂಟರ್‌ ನ್ಯಾಷನಲ್‌ ಅನಂತಸ್ಪರ್ಷ ಲೀಜನ್‌ ಪೆರ್ಡೂರು ಸ್ಥಾಪಕಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪುರುಷೋತ್ತಮ ಐತಾಳ್, ಕಾರ್ಯದರ್ಶಿ ಸತೀಶ್ ಎನ್ ಶೆಟ್ಟಿ ಬುಕ್ಕಿಗುಡ್ಡೆ, ಪದಾಧಿಕಾರಿಗಳು, ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.

ಸುರೇಶ್ ಕರ್ಕೇರ ಪರಿಚಯಿಸಿದರು. ಸತೀಶ್ ಶೆಟ್ಟಿ ಸಿನಿಯರ್ ವಾಣಿ ವಾಚಿಸಿದರು. ಪುರುಷೋತ್ತಮ ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆರ್ಡೂರು ಉಪೇಂದ್ರ ಆಚಾರ್ಯ ನಿರೂಪಿಸಿದರು ವಂದಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!