ದೊಂಡೆರಂಗಡಿ : ದೊಂಡರಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ದೊಂಡೆರಂಗಡಿ ಕೆ. ರಮಾನಂದ ಹೆಗ್ಡೆ ಸ್ಮಾರಕ ಕಲಾರಂಗ ಮಂಟಪದಲ್ಲಿ ಇದೇ 14 ಮತ್ತು 15 ರಂದು 33ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಭಕ್ತಿ ವೈಭವದಿಂದ ನಡೆಯಲಿದೆ. ಅರ್ಚಕರಾದ ಜನಾರ್ಧನ ಆಚಾರ್ಯ ಮತ್ತು ಪಿ. ಶ್ರೀನಿವಾಸ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಗಣೇಶೋಥ್ಸವ ವೈಭವ ನಡೆಯಲಿದೆ. ಭಜನೆ, ಯಕ್ಷಗಾನ, ನೃತ್ಯವೈಭವ, ಭಕ್ತಿಗಾನ ಲಹರಿ, ಜನಪದ ಸೊಗಡು ವಿಶೇಷ ಕಾರ್ಯಕ್ರಮ, ಸಮಿತಿಯ ಸದಸ್ಯರಿಂದ ತುಳು ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ. ವಿವಿಧ ಆಟೋಟ ಸ್ಪರ್ಧೇಗಳು ನಡೆಯಲಿದೆ. 2 ದಿನಗಳ ಕಾಲ ನಡೆಯುವ ಸಂಭ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಲಿದ್ದಾರೆ.
15 ರಂದು ಮಹಾಪೂಜೆಯ ಬಳಿಕ ಆಕರ್ಷಕ ಮೆರವಣಿಗೆ ನಡೆಯಲಿದೆ. ಚೆಂಡೆವಾದನ, ವಿವಿಧ ಮುಖವಾಡ ನೃತ್ಯಗಳು, ತಾಸೆ, ನಾಗಸ್ವರ, ಕೊಂಬುವಾದನ, ನಾಸಿಕ್ ಬ್ಯಾಂಡ್ ಸಹಿತ ಕಲಾಪ್ರಕಾರಗಳ ಜೊತೆಗೆ ಶ್ರೀ ಗಣಪತಿ ದೇವರ ವರ್ಣರಂಜಿತ ಮೆರವಣಿಗೆ ನಡೆಯಲಿದೆ. ಪ್ರಸ್ತುತ ವರ್ಷದಲ್ಲಿ ಮುಂಡಾರು ಪ್ರಸನ್ನ ಶೆಟ್ಟಿ ಅವರ ಗೌರವಾಧ್ಯಕ್ಷತೆಯಲ್ಲಿ ಅಖಿಲೇಶ್ ಶೆಟ್ಟಿ ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದಾರೆ.
ರಾಕೇಶ್ ಶೆಟ್ಟಿ, ಹರೀಶ್ ಶೆಟ್ಟಿ ಪರ್ಸರಬೆಟ್ಟು, ಸಂಪತ್ ಕುಮಾರ್ ಪನೋಲು, ವಿಕಾಸ ಹೆಗ್ಡೆ, ರವೀಂದ್ರ ನಾಯ್ಕ್ ಉಪಾಧ್ಯಕ್ಷರಾಗಿ, ಪ್ರದೀಪ್ ಶೆಟ್ಟಿ ಕಾರ್ಯದರ್ಶಿಯಾಗಿ, ಪ್ರಸನ್ನ ದೇವಾಡಿಗ ಕೋಶಾಧಿಕಾರಿಯಾಗಿ, ಶಿವರಾಜ್ ಪೂಜಾರಿ ಜೊತೆ ಕಾರ್ಯದರ್ಶಿಯಾಗಿ, ಅರುಣ್ ಶೆಟ್ಟಿ ಮತ್ತು ರವೀಂದ್ರ ಆಚಾರ್ಯ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ದೀಪಕ್ ಶೆಟ್ಟಿ, ಗಣೇಶ ನಾಯ್ಕ್, ವಿರೇಶ ಕುಮಾರ್, ಧನರಾಜ್ ಹೆಗ್ಡೆ ಕ್ರೀಡಾ ಕಾರ್ಯದರ್ಶಿಗಳಾಗಿ, ದಯಾನಂದ ಹೆಗ್ಡೆ, ಹರೀಶ ದುಗ್ಗನಬೆಟ್ಟು, ನಿತ್ಯಾನಂದ ಹೆಗ್ಡೆ, ಶ್ರೀನಿವಾಸ ಆಚಾರ್ಯ ಗೌರವಸಲಹೆಗಾರರಾಗಿ ಹಾಗೂ ಅಶೋಕ್ ಕುಮಾರ್, ಅಶೋಕ್ ನಾಯ್ಕ್, ಹರಿಪ್ರಸಾದ್ ಶೇಟ್ಟಿ, ಅಂಕಿತ್ ಹೆಗ್ಡೆ ಸ್ವಾಗತ ಸಮಿತಿಯಲ್ಲಿ, ನಾರಾಯಣ ನಾಯ್ಕ್, ಸುಧೀರ ಶೆಟ್ಟಿ, ಸಂತೋಷ ಮಡಿವಾಳ, ಪ್ರಸನ್ನ ಹೆಗ್ಡೆ, ಉದಯ ಬಾಚಿನೆಲ್ಲಿ, ಪ್ರತೀಕ್ ಪೂಜಾ ಸಮಿತಿಯಲ್ಲಿ ಸೇವೆ ಸಲ್ಲಿಸಿ ಸಂಭ್ರಮ ಗಣೇಶೋತ್ಸವದ ಯಶಸ್ಸಿಗೆ ಶ್ರಮಿಸುತ್ತಾರೆ. ಕುಕ್ಕುಜೆ ಡೊಂಡೆರಂಗಡಿ ಶಾಲೆಯ ಅಧ್ಯಾಪಕ ವೃಂದ, ಹಳೇ ವಿದ್ಯಾರ್ಥಿಗಳು ಸೇರಿ ಸರ್ವರು ವಿಶೇಷ ಸಹಕಾರ ನೀಡಲಿದ್ದಾರೆ.




