ಮುಖ್ಯ ರಸ್ತೆಯ ಹೊಂಡಕ್ಕೆ ಮುಕ್ತಿ !
ಹೆಬ್ರಿಗೆ ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ತಯಾರಿಗಳು ಬರದಿಂದ ಸಾಗುತ್ತಿದೆ. ಹೆಬ್ರಿ ಕೇಳಪೇಟೆಯಿಂದ ಮೇಲ್ಪೇಟೆ ತನಕ ಗುಂಡಿ ಬಿದ್ದ ರಸ್ತೆಯ ದುರಸ್ತಿ ನಡೆದಿದೆ. ಪಾರ್ಕಿಂಗ್ ಆವರಣದ ಸಂಪೂರ್ಣ ಸ್ವಚ್ಛತೆ ನಡೆದಿದೆ. ಹೆಲಿಫ್ಯಾಡ್, ಸಭಾ ಕಾರ್ಯಕ್ರಮಕ್ಕೆ ಬೇಕಾದ ತಯಾರಿಗಳು ಅಂತಿಮ ಹಂತ ತಲುಪಿದೆ.



