Thursday, September 24, 2026
Homeಹೆಬ್ರಿಹೆಬ್ರಿ ವ್ಯವಸಾಯ ಸೇವಾ ಸಹಕಾರ ಸಂಘ 326.80 ಕೋಟಿ ವ್ಯವಹಾರ. 58.01 ಲಕ್ಷ ರೂಪಾಯಿ ಲಾಭ...

ಹೆಬ್ರಿ ವ್ಯವಸಾಯ ಸೇವಾ ಸಹಕಾರ ಸಂಘ 326.80 ಕೋಟಿ ವ್ಯವಹಾರ. 58.01 ಲಕ್ಷ ರೂಪಾಯಿ ಲಾಭ : ಅಡಿಟ್ ” ಎ ಗ್ರೇಡ್ ” ಮಾನ್ಯತೆ.

ಹೆಬ್ರಿ : ಹೆಬ್ರಿ ವ್ಯವಸಾಯ ಸೇವಾ ಸಹಕಾರ ಸಂಘವು 2025-26 ನೇ ಸಾಲಿನಲ್ಲಿ ಒಟ್ಟು 326.80 ಕೋಟಿ ವ್ಯವಹಾರ ನಡೆಸಿ ರೂ.58.01 ಲಕ್ಷ ನಿವ್ವಳ ಲಾಭ ಗಳಿಸಿದೆ. ವರ್ಷಾಂತ್ಯಕ್ಕೆ ಒಟ್ಟು11304 ಸದಸ್ಯರನ್ನು ಹೊಂದಿದ್ದು ಒಟ್ಟು 2.85 ಕೋಟಿ ಪಾಲು ಬಂಡವಾಳ ಸಂಗ್ರಹಿಸಿದೆ, ವರ್ಷಾಂತ್ಯಕ್ಕೆ 80.21 ಕೋಟಿ ಠೇವಣಿ ಒಟ್ಟುಗೂಡಿಸಿದೆ ಎಂದು ಸಂಘದ ಅಧ್ಯಕ್ಷರಾದ ನವೀನ್ ಕೆ ಅಡ್ಯಂತಾಯ ತಿಳಿಸಿದರು.

ಅವರು ಬುಧವಾರ ಹೆಬ್ರಿ ವ್ಯವಸಾಯ ಸೇವಾ ಸಹಕಾರ ಸಂಘದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಹೆಬ್ರಿಯಲ್ಲಿ ಪ್ರಧಾನ ಕಛೇರಿ ಹಾಗೂ ಶಿವಪುರ, ಬೇಳಂಜೆ ಹಾಗೂ ನಾಡ್ಪಾಲು ಗ್ರಾಮದಲ್ಲಿ ಪೂರ್ಣ ಪ್ರಮಾಣದ ಶಾಖೆಯನ್ನು ಹೊಂದಿದೆ.

ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ 57.26 ಕೋಟಿ ಸಾಲ ವಿತರಿಸಿದ್ದು, ಸದಸ್ಯರ ಹೊರಬಾಕಿ ಸಾಲ 67.92 ಕೋಟಿ ಆಗಿದ್ದು, ಪ್ರಗತಿಯನ್ನು ಕಾಯ್ದು ಕೊಂಡಿದೆ. ಸಂಘದ ಒಟ್ಟು ದುಡಿಯುವ ಬಂಡವಾಳ 95.41 ಕೋಟಿ ಆಗಿರುತ್ತದೆ ಎಂದು ನವೀನ್ ಕೆ ಅಡ್ಯಂತಾಯ ಹೇಳಿದರು.

ಸಂಘವು ತನ್ನ ಸದಸ್ಯರಿಗೆ ಕೃಷಿ ಹಾಗೂ ಕೃಷಿಯೇತರ ಉದ್ದೇಶಗಳಿಗೆ ಎಲ್ಲಾ ತರದ ಸಾಲ ಸವಲತ್ತುಗಳನ್ನು ನೀಡುತ್ತಿದೆ. ರೈತ ಸದಸ್ಯರಿಗೆ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡು ಸಾಲವಾಗಿ ರಾಜ್ಯ ಸರ್ಕಾರದ ಶೇ. 0% ಬಡ್ಡಿ ಯೋಜನೆಯಲ್ಲಿ 22.12 ಕೋಟಿ ಸಾಲ ವಿತರಿಸಲಾಗಿದೆ. ವರ್ಷದ ಅಖೈರಿಗೆ 22.59 ಕೋಟಿ ಸಾಲ ಹೊರಬಾಕಿ ಇರುತ್ತದೆ.

ಡೈರಿ ಕಿಸಾನ್ ಕ್ರೆಡಿಟ್ ಕಾರ್ಡು ಸಾಲವಾಗಿ ರಾಜ್ಯ ಸರ್ಕಾರದ ಶೇ. 0% ಬಡ್ಡಿ ಯೋಜನೆಯಲ್ಲಿ 74.60 ಲಕ್ಷ ಸಾಲ ವಿತರಿಸಿಸಲಾಗಿದ್ದು, ವರ್ಷದ ಅಖೈರಿಗೆ 75.90 ಲಕ್ಷ ಸಾಲ ಹೊರಬಾಕಿ ಇರುತ್ತದೆ

ಶೇ.3 ಬಡ್ಡಿ ದರದಲ್ಲಿ 5.74 ಕೋಟಿ ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದ್ದು, ವರ್ಷದ ಅಖೈರಿಗೆ 15.06 ಕೋಟಿ ಸಾಲ ಹೊರಬಾಕಿ ಇರುತ್ತದೆ. ಸಾಲ ವಿತರಣೆ ಪ್ರಮಾಣದಲ್ಲಿ ಶೇ.50.54 ಕೃಷಿ ಉದ್ದೇಶಕ್ಕೆ ವಿತರಿಸಲಾಗಿದೆ. ಸರ್ಕಾರದ ಭೂ ಸಂಮೃದ್ಧಿ ಯೋಜನೆ, ಪಶು ಭಾಗ್ಯ ಯೋಜನೆ, ಗಿರಿಜನ ಉಪಯೋಜನೆ, ವಿಶೇಷ ಘಟಕ ಯೋಜನೆ, ಯಶಸ್ವಿನಿ ಯೋಜನೆಯಡಿಯಲ್ಲಿ ಒಟ್ಟು 156 ಸದಸ್ಯರನ್ನು ನೊಂದಾಯಿಸಲಾಗಿದೆ.

ಇತರ ಯೋಜನೆಗಳಡಿಯಲ್ಲಿ ವಿವಿಧ ಇಲಾಖೆಗಳ ಮೂಲಕ ಸಹಾಯಧನದಲ್ಲಿ ಆರ್ಥಿಕ ನೆರವನ್ನು ನೀಡುತ್ತಿದೆ. ನವೋದಯ ಸ್ವಸಹಾಯ ಗುಂಪುಗಳು, ಸ್ತ್ರೀ ಶಕ್ತಿ ಗುಂಪು ಹಾಗೂ ಇನ್ನಿತರ ಇಲಾಖೆಯ ಸ್ವಸಹಾಯ ಗುಂಪುಗಳು ಸೇರಿದಂತೆ ಒಟ್ಟು 345 ಸ್ವಸಹಾಯ ಗುಂಪುಗಳ ಖಾತೆಗಳ ಸೇವೆಯನ್ನು ನಿರ್ವಹಿಸಿ ವರ್ಷದ ಅಖೈರಿಗೆ ರೂ. 104.02 ಲಕ್ಷ ಉಳಿತಾಯವಿದ್ದು, ರೂ.30.53 ಲಕ್ಷ ಸಾಲ ಹೊರ ಬಾಕಿ ಇರುತ್ತದೆ ಎಂದು ನವೀನ್ ಕೆ ಅಡ್ಯಂತಾಯ ತಿಳಿಸಿದರು.

ಬ್ಯಾಂಕಿಗ್ ವ್ಯವಹಾರದ ಜೊತೆಗೆ ಪಡಿತರ ಸಾಮಾಗ್ರಿಗಳ ವಿತರಣೆ, ರಾಸಾಯನಿಕ ಗೊಬ್ಬರ, ಕೀಟನಾಶಕ ಮಾರಾಟ ಇತ್ಯಾದಿ ವ್ಯವಹಾರಗಳನ್ನು ಮಾಡುತ್ತಿದ್ದು, ಆರ್ಥಿಕ ವರ್ಷದಲ್ಲಿ 85.98 ಲಕ್ಷ ವ್ಯವಹಾರವನ್ನು ಮಾಡಲಾಗಿದೆ.

ಸಾಲಗಾರ ಸದಸ್ಯರ ಅನುಕೂಲಕ್ಕಾಗಿ ವೈಯಕ್ತಿಕ ಗುಂಪು ಅಫಘಾತ ವಿಮಾ ಯೋಜನೆಯಡಿ 1755 ಸದಸ್ಯರನ್ನು ನೋಂದಾಯಿಸಲಾಗಿದೆ.

ವರದಿ ಸಾಲಿನಲ್ಲಿ ಸಂಘವು ತನ್ನ ಕಾರ್ಯವ್ಯಾಪ್ತಿಯಲ್ಲಿ ಸಾಧಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನವರು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಗ್ರಾಹಕರ ಕ್ಷಿಪ್ರ ಸೇವೆಯ ಅನುಕೂಲಕ್ಕಾಗಿ ಸಂಘದ ಪ್ರಧಾನ ಕಚೇರಿ, ಹಾಗೂ ಶಾಖೆಗಳ ಎಲ್ಲಾ ಲೆಕ್ಕ ಪತ್ರಗಳನ್ನು ಕನ್ನಡದಲ್ಲಿ ಗಣಕೀಕರಣಗೊಳಿಸಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಭದ್ರತಾ ಕೋಶಗಳ ಸವಲತ್ತನ್ನು ಕಡಿಮೆ ಬಾಡಿಗೆಯಲ್ಲಿ ಒದಗಿಸಲಾಗುತ್ತಿದೆ. ಸಂಘದ ಕ್ಷೀತ್ರ ಕಾರ್ಯನಿರ್ವಹಣೆಗೆ ಸ್ವಂತ ಬೋಲೆರೋ ಜೀಪ್ ಹೊಂದಿದ್ದು, ಗ್ರಾಹಕರ ಸಾಲದ ಬಗ್ಗೆ ಸ್ಥಳ ಪರಿಶೀಲನೆ, ಸಾಲ ವಸೂಲಿ ಬಗ್ಗೆ ಶೀಘ್ರ ಕಾರ್ಯಪ್ರವರ್ತರಾಗಲು, ಕಛೇರಿ ಕಾರ್ಯಗಳಿಗೆ ಅನುಕೂಲಕರವಾಗುತ್ತಿದೆ ಎಂದು ನವೀನ್ ಕೆ ಅಡ್ಯಂತಾಯ ಮಾಹಿತಿ ನೀಡಿದರು.

ಸಂಘವು ಈ ತನಕವೂ ಅಡಿಟ್ ನಲ್ಲಿ ” ಬಿ ಗ್ರೇಡ್ ” ಹೊಂದಿತ್ತು. ಪ್ರಸಕ್ತ 2025 – 2026ನೇ ಸಾಲಿನಲ್ಲಿ ” ಎ” ಗ್ರೇಡ್ ಅಡಿಟ್ ಮಾನ್ಯತೆಯನ್ನು ಪಡೆದಿದೆ.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಅತ್ಯುತ್ತಮ ಸೇವೆ, ಆಡಳಿತ ಮಂಡಳಿಯ ಸಹಕಾರ, ಪಾರದರ್ಶಕತೆಯ ಸೇವೆ, ಸದಸ್ಯರ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅಧ್ಯಕ್ಷರಾದ ನವೀನ್ ಕೆ ಅಡ್ಯಂತಾಯ ಮೆಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನ ಮತ್ತು ವಿಶೇಷ ಸಹಕಾರದಲ್ಲಿ ನಮ್ಮ ಸಂಸ್ಥೆಯು ಮುನ್ನಡೆಯುತ್ತಿದೆ. ಎಸ್ ಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ, ಪ್ರಧಾನ ವ್ಯವಸ್ಥಾಪಕರು, ಆಡಳಿತ ವರ್ಗದ ಸಂಪೂರ್ಣ ಸಹಕಾರದಿಂದ ನಮ್ಮ ಸಾಧನೆಗೆ ಕಾರಣವಾಗಿದೆ ಎಂದು ನವೀನ್ ಕೆ ಅಡ್ಯಂತಾಯ ಕೃತಜ್ಞತೆ ಸಲ್ಲಿಸಿದರು.

ಸಿ.ಎಂ. ಸಭೆಗೆ ಸದಸ್ಯರು ಬನ್ನಿ : ನವೀನ್ ಕೆ ಅಡ್ಯಂತಾಯ. ನಮ್ಮ ಸಂಘದ ಬಹುತೇಕ ಸದಸ್ಯರು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಸೇರುತ್ತಾರೆ. 40% ಜನತೆಗೆ ನಾವು ಇದೇ ಪ್ರದೇಶದ ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ನೀಡಿದ್ದೇವೆ. ಜನತೆಗೆ ಯಾವೂದೇ ಸಮಸ್ಯೆ ಕಸ್ತೂರಿ ರಂಗನ್ ವರದಿಯಿಂದ ಆಗಬಾರದು. ಮುಖ್ಯಮಂತ್ರಿಗಳ ಸಭೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಸದಸ್ಯರಿಗೆ ನವೀನ್ ಅಡ್ಯಂತಾಯ ಮನವಿ ಮಾಡಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೀನ ನಾಯ್ಕ್, ಉಪಾಧ್ಯಕ್ಷ ಬೇಳಂಜೆ ಹರೀಶ್ ಪೂಜಾರಿ, ನಿರ್ದೇಶಕರಾದ ಕೆ.ದೇವು, ರಾಘವೇಂದ್ರ ನಾಯ್ಕ್ ಉಪಸ್ಥಿತರಿದ್ದರು. ಶೀನ ನಾಯ್ಕ್ ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!