Thursday, September 24, 2026
Homeಹೆಬ್ರಿಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ಶ್ರೀ ವಿಶ್ವಕರ್ಮ ಜಯಂತಿ.

ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ಶ್ರೀ ವಿಶ್ವಕರ್ಮ ಜಯಂತಿ.

ವಿಶ್ವಕರ್ಮ ವಿಶ್ವದ ಮೊದಲ ಎಂಜಿನಿಯರ್ ಆಗಿದ್ದಾರೆ : ರಾಘವೇಂದ್ರ ನಾಯಕ್.

ವಿಶ್ವಕರ್ಮರು ಸರ್ವರಿಗೂ ಬೇಕಾದವರು : ಟಿ.ಜಿ.ಆಚಾರ್ಯ.

ಹೆಬ್ರಿ : ಸೃಷ್ಠಿಯ ಮೂಲವೇ ವಿಶ್ವಕರ್ಮರು, ವಿಶ್ವಕರ್ಮ ವಿಶ್ವದ ಮೊದಲ ಎಂಜಿನಿಯರ್ ಆಗಿದ್ದಾರೆ. ವಿಶ್ವಕರ್ಮ ಜಯಂತಿ ನಮಗೆಲ್ಲ ಹೆಮ್ಮೆ ಸಂಭ್ರಮ ಎಂದು ಹೆಬ್ರಿಯ ಉಪ ತಹಶೀಲ್ಧಾರ್ ರಾಘವೇಂದ್ರ ನಾಯಕ್ ಹೇಳಿದರು.

ಅವರು ಗುರುವಾರ ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶ್ವಕರ್ಮರು ಪರಂಪರೆಗೆ ದೊಡ್ಡ ಕೊಡುಗೆ ನೀಡಿದವರು. ಸರ್ವರಿಗೂ ವಿಶ್ವಕರ್ಮರು ಬೇಕಾದವರು, ಸೃಷ್ಠಿಯ ಶಿಲ್ಪಿ, ಕಾಯಕದ ಮೌಲ್ಯವನ್ನು ನಾವು ಅರಿಯಬೇಕು, ಶ್ರೀವಿಶ್ವಕರ್ಮ ಪುರಾತನ ದೇವ ಶಿಲ್ಪಿ ಮಾತ್ರ ಅಲ್ಲ, ಶ್ರಮಜೀವನದ ಭವ್ಯ ಪರಂಪರೆ ಎಂದು ವಿಶ್ವಕರ್ಮ ಸಮುದಾಯದ ಮುಖಂಡರಾದ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಹೆಬ್ರಿ ಟಿ.ಜಿ.ಆಚಾರ್ಯ ಹೇಳಿದರು. ಕೌಶಲ್ಯವನ್ನು ಬೆಳೆಸಿ ಕಾಯಕವನ್ನು ಗೌರವಿಸುವ ಕಾರ್ಯವನ್ನು ವಿಶ್ವಕರ್ಮರಾದ ನಾವೆಲ್ಲರೂ ಮಾಡಬೇಕಿದೆ. ನಾಡಿನ ಪರಂಪರೆ ಮತ್ತು ಕೌಶಲ್ಯ ನಾವು ಸಂಭ್ರಮಿಸುವುದೇ ವಿಶ್ವಕರ್ಮ ಜಯಂತಿಯ ಸಂದೇಶ ಎಂದು ಟಿ.ಜಿ.ಆಚಾರ್ಯ ಹೇಳಿದರು.

ಸರ್ಕಾರವೇ ವಿಶ್ವಕರ್ಮ ಜಯಂತಿಯನ್ನು ಆಚರಿಸುತ್ತಿರುವುದು ಸಮುದಾಯ ಮತ್ತು ನಮಗೆಲ್ಲ ಅತ್ಯಂತ ಹೆಮ್ಮೆ ಎಂದು ಟಿ.ಜಿ.ಆಚಾರ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಮುದ್ರಾಡಿ ಕೇಶವ ಆಚಾರ್ಯ ಮಾತನಾಡಿ ವಿಶ್ವಕರ್ಮರ ಪಂಚಕಸುಬುಗಳನ್ನು ಉಳಿಸಿ ಬೆಳೆಸುವ ಜೊತೆಗೆ ಕೌಶಲ್ಯದಿಂದ ಉದ್ಯಮಿಗಳಾಗಿ ಉದ್ಯೋಗದಾತರಾಗಿ ಎಂದು ಆಶಿಸಿದರು.

ಕೌಶಲ್ಯ ವಿಶ್ವಕರ್ಮರಿಗೆ ರಕ್ತಗತವಾಗಿ ಬಂದಿದೆ ಎಂದು ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ಎಂ.ಶಶಿಶಂಕರ್ ಹೇಳಿದರು.

ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಮುದ್ರಾಡಿ ಕೇಶವ ಆಚಾರ್ಯ, ಪ್ರದಾನ ಕಾರ್ಯದರ್ಶಿ ಹೆಚ್.ಎಂ.ಶಶಿಶಂಕರ್, ಮಹಿಳಾ ಮಂಡಳಿ ಅಧ್ಯಕ್ಷೆ ಪ್ರೇಮಾ ಎಂ ವರಂಗ,ಉಪ ತಹಶೀಲ್ಧಾರ್ ರಾಹೇಲ್ ಸುಜ್ಯೋತಿ,  ತಾಲ್ಲೂಕು ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ, ಮಹಿಳಾ ಮಂಡಳಿ ಹಾಗೂ ಯುವ ವೃಂದದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ಹೆಚ್.ಎಂ.ಶಶಿಶಂಕರ್ ಸ್ವಾಗತಿಸಿ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!