ಹೆಬ್ರಿ : ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜಸೇವಾ ಸಂಘದ ವತಿಯಿಂದ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಮತ್ತು ಯುವ ವೃಂದದ ಸಹಕಾರದಲ್ಲಿ ಸಂಘದ ಸಮುದಾಯ ಭವನದಲ್ಲಿ 43ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಗುರುವಾರ ನಡೆಯಿತು.
ರವೀಂದ್ರ ಪುರೋಹಿತ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಸಂಘದ ಅಧ್ಯಕ್ಷ ಮುದ್ರಾಡಿ ಕೇಶವ ಆಚಾರ್ಯ ದಂಪತಿಗಳು ಪೂಜೆಯಲ್ಲಿ ಪಾಲ್ಗೊಂಡರು. ಕಾರ್ಯದರ್ಶಿಗಳಾದ ಹೆಚ್.ಎಂ.ಶಶಿಶಂಕರ್, ಸುರೇಂದ್ರ ಆಚಾರ್ಯ, ಉಪಾಧ್ಯಕ್ಷ ಸದಾಶಿವ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಪ್ರೇಮಾ ಎಂ, ಪ್ರಮುಖರಾದ ಹೆಬ್ರಿ ಟಿ.ಜಿ.ಆಚಾರ್ಯ, ರತ್ನಾಕರ ಆಚಾರ್ಯ ಶಿವಪುರ, ಜಯರಾಮ ಆಚಾರ್ಯ ಹುತ್ತುರ್ಕೆ, ರಾಘವೇಂದ್ರ ಆಚಾರ್ಯ, ಶ್ರೀಧರ ಆಚಾರ್ಯ ಶಿವಪುರ, ಭಾಸ್ಕರ ಆಚಾರ್ಯ ಸೀತಾನದಿ, ಗಣಪತಿ ಆಚಾರ್ಯ, ಜಗನ್ನಾಥ ಆಚಾರ್ಯ, ಪ್ರಶಾಂತ ಆಚಾರ್ಯ ಮಠದಬೆಟ್ಟು, ಮಹಿಳಾ ಮಂಡಳಿಯ ಸುಗುಣ ಆಚಾರ್ಯ, ಆಶಾ ಆಚಾರ್ಯ, ಅನುಷಾ ಆಚಾರ್ಯ, ಸರಸ್ವತಿ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.



