ದೊಂಡೆರಂಗಡಿ : ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸಂಘ ರಿ, ಹಾಗೂ ಗಾಯತ್ರಿ ಮಹಿಳಾ ಮಂಡಳಿ ದೊಂಡೆರಂಗಡಿ ಇದರ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಪೂಜೆಯು ವೈದಿಕರಾದ ಶ್ರೀ ಜಗನಾಥ ಶರ್ಮ ಮೂಡುಬಿದ್ರಿ ಇವರ ವೈದಿಕತ್ವದಲ್ಲಿ ಸಂಘದ ಗೌರವಾಧ್ಯಕ್ಷ ಕೆ ಶ್ರೀಧರ ಆಚಾರ್ಯ ದಂಪತಿಯವರ ಯಜಮಾನತ್ವದಲ್ಲಿ ಸಂಘದ ಕಟ್ಟಡದಲ್ಲಿ ಗುರುವಾರ ನಡೆಯಿತು.
ಸಂಘದ ಅಧ್ಯಕ್ಷರು ಕಾರ್ಯಕಾರಿ ಸಮಿತಿ ಸರ್ವ ಸದಸ್ಯರು ಹಾಗೂ ಗಾಯತ್ರಿ ಮಹಿಳಾ ಮಂಡಳಿಯ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ವಿಜ್ರಮಣೆಯಿಂದ ನಡೆಯಿತು.



