Thursday, September 24, 2026
Homeಹೆಬ್ರಿಹೆಬ್ರಿ ಸರ್ಕಾರಿ ಸಮುದಾಯ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ- ನಾಡ್ಪಾಲು ಹರೀಶ ಶೆಟ್ಟಿ ಸಚಿವರಿಗೆ ಮನವಿ.

ಹೆಬ್ರಿ ಸರ್ಕಾರಿ ಸಮುದಾಯ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ- ನಾಡ್ಪಾಲು ಹರೀಶ ಶೆಟ್ಟಿ ಸಚಿವರಿಗೆ ಮನವಿ.

ಹೆಬ್ರಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಸಕಲ ಮೂಲ ಸೌಕರ್ಯವನ್ನು ನೀಡಿ ಜನತೆಗೆ ಅತ್ಯುತ್ತಮ ಆರೋಗ್ಯ ಸೇವೆ ನೀಡಬೇಕು ಎಂದು ಕಾಂಗ್ರೆಸ್‌ ಯುವ ಮುಖಂಡ ನಾಡ್ಪಾಲು ಹರೀಶ ಶೆಟ್ಟಿ ಅವರು ಗುರುವಾರ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್‌ ಅರ್ಷದ್‌ ಅವರಿಗೆ ಹೆಬ್ರಿಯಲ್ಲಿ ಮನವಿ ಸಲ್ಲಿಸಿದರು.

ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ಸೀಮಿತ ಹಾಸಿಗೆ, ಶಸ್ತ್ರಚಿಕಿತ್ಸೆ, ತುರ್ತು ಚಿಕಿತ್ಸೆ, ವಿಶೇಷ ವೈಧ್ಯಕೀಯ ಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರು ದೂರದ ಉಡುಪಿ ಮಣಿಪಾಲ, ಕುಂದಾಪುರಕ್ಕೆ ಹೋಗುವ ಅನಿವಾರ್ಯತೆಯಿದೆ.
ಬಹುಕಾಲದ ಬೇಡಿಕೆಯಾದ ಹೆಬ್ರಿ ಸರ್ಕಾರಿ ಸಮುದಾಯ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ೧೦೦ ಹಾಸಿಗೆ ವ್ಯವಸ್ಥೆ, ಅಗತ್ಯ ತಜ್ಞ ವೈಧ್ಯರು, ನರ್ಸಿಂಗ್‌ ಮತ್ತು ವೈಧ್ಯಕೀಯ ಸಿಬ್ಬಂದಿ, ೨೪ ಗಂಟೆ ತುರ್ತು ಸೇವೆ, ಶಸ್ತ್ರಚಿಕಿತ್ಸ ಘಟಕ, ಪ್ರಸೂತಿ ಮತ್ತು ಶಿಶು ಆರೈಕೆ, ಐಸಿಯು, ಡಯಾಲಿಸಿಸ್‌, ಸ್ಕ್ಯಾನಿಂಗ್‌ ಹಾಗೂ ಆಧುನಿಕ ಪ್ರಯೋಗಾಲಯ ಸೇರಿದಂತೆ ಮೂಲಸೌಕರ್ಯ ನೀಡುವಂತೆ ಹರೀಶ ಶೆಟ್ಟಿ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!