ಜನರ ಆತಂಕ ದೂರ ಮಾಡುವ ಭರವಸೆ ಇದೆ : ಮುದ್ರಾಡಿ ಮಂಜುನಾಥ ಪೂಜಾರಿ.
ಹೆಬ್ರಿ : ಕಸ್ತೂರಿ ರಂಗನ್ ವರದಿಯಿಂದ ಬದುಕು ಕಳೆದುಕೊಳ್ಳುವ ಆತಂಕದಲ್ಲಿದ್ದ ಜನರ ಅಳಲನನ್ನು ಮುಖ್ಯಮಂತ್ರಿಯವರು ಹೆಬ್ರಿಗೆ ಬಂದು ಆಲಿಸಿ ನೀಡಿದ ಭರವಸೆಯಿಂದ ಜನತೆ ಖುಷಿಯಾಗಿದ್ದಾರೆ. ಆತಂಕ ದೂರವಾಗುವ ದಿನಗಳು ಹತ್ತಿರವಾಗಿವೆ, ಶೀಘ್ರವಾಗಿ ಜನರ ಪರವಾದ ತೀರ್ಮಾನವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳಲಿದ್ದಾರೆ, ಇನ್ನೂ ಜನತೆಗೆ ಆತಂಕ ಬೇಡ, ಪಕ್ಷಾಭೇದವಿಲ್ಲದೆ ಜನಪ್ರತಿನಿಧಿಗಳು, ಸಾರ್ವಜನಿಕರ ಅಳಲನ್ನು ಮುಖ್ಯಮಂತ್ರಿಯವರು ಆಲಿಸಿದ್ದಾರೆ ಎಂದು ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಶನಿವಾರ ಹೆಬ್ರಿಯ ನಾರಾಯಣಗುರು ಸಮುದಾಯ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಜನರ ಸಮಸ್ಯೆಯನ್ನು ಆಲಿಸಿದ ಮುಖ್ಯಮಂತ್ರಿಗಳಿಗೆ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವೆ ಎಂದು ಮಂಜುನಾಥ ಪೂಜಾರಿ ಮುಖ್ಯಮಂತ್ರಿಗಳ ನೇರ ಸಂವಾದವನ್ನು ಅತ್ಯಂತ ಯಶಸ್ವಿಗೊಳಿಸಿದ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾಡಳಿತದ ತಂಡ, ಜನಪ್ರತಿನಿಧಿಗಳು, ಪಕ್ಷದ ಮುಂಖಡರು, ಕಾರ್ಯಕರ್ತರಿಗೆ, ಉಸ್ತುವಾರಿ ಸಚಿವರಿಗೆ ಮಂಜುನಾಥ ಪೂಜಾರಿ ಕೃತಜ್ಞತೆ ಸಲ್ಲಿಸಿದ್ದಾರೆ.
ಜನತೆ ಇನ್ನು ಆತಂಕ ಪಡುವ ಅಗತ್ಯ ಇಲ್ಲ ಎಂದು ಮಂಜುನಾಥ ಪೂಜಾರಿ ಹೇಳಿದರು. 10 ಸಾವಿರದಷು ಮಂದಿ ಜನ ಸಭೆಗೆ ಸೇರಿದ್ದರು. ಆ ಮೂಲಕ ಸಭೆಯನ್ನು ಯಶಸ್ವಿಗೊಳಿಸಿದ ಜನತೆಗೂ ಕೃತಜ್ಞತೆಯನ್ನು ಸಲ್ಲಿಸಿದ ಹೆಬ್ರಿಯ ಉದ್ಯಮಿಗಳು ಸೇರಿ ಸಹಕರಿದ ಸರ್ವರಿಗೂ ಋಣಿಯಾಗಿದ್ದೇವೆ ಎಂದರು. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನವೀನ್ ಕೆ.ಅಡ್ಯಂತಾಯ, ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್, ಪ್ರಮುಖರಾದ ಎಚ್.ಜನಾರ್ಧನ್, ಭೋಜ ಪೂಜಾರಿ, ಶಶಿಕಲಾ ಆರ್ ಪಿ ಉಪಸ್ಥಿತರಿದ್ದರು.



