Thursday, September 24, 2026
Homeಹೆಬ್ರಿಪ್ರಧಾನಿ ನರೇಂದ್ರ ಮೋದಿಯವರ ಜನಸೇವೆಯ ಯಶಸ್ವಿ 25 ವರ್ಷಗಳು: ಶುಭಹಾರೈಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ .

ಪ್ರಧಾನಿ ನರೇಂದ್ರ ಮೋದಿಯವರ ಜನಸೇವೆಯ ಯಶಸ್ವಿ 25 ವರ್ಷಗಳು: ಶುಭಹಾರೈಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ .

ಅಮೀತ್ ಶಾ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿ.

ಹುಬ್ಬಳ್ಳಿ : ದೇಶದ ಹೆಮ್ಮೆಯ ಪ್ರಧಾನಿ ಆದರಣೀಯ ಶ್ರೀ ನರೇಂದ್ರ ಮೋದಿ ಜೀ ರವರು ಸಾರ್ಥಕ ಜನಸೇವೆ, ಸಮರ್ಥ ನಾಯಕತ್ವದ ಹಿನ್ನಲೆಯಲ್ಲಿ ಯಶಸ್ವಿ 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶುಭ ಹಾರೈಸಿದ್ದಾರೆ.

ಆ ನಿಮಿತ್ತ ಪಕ್ಷ ನಡೆಸುತ್ತಿರುವ ‘ಸೇವಾ ಸಂಕಲ್ಪ ಅಭಿಯಾನ’ದ ನಡುವೆ, ಶನಿವಾರ ಬಿಜೆಪಿ ಹಿರಿಯ ನಾಯಕರು, ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮೀತ್ ಶಾ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದರು. ವಿಕಸಿತ ಭಾರತದ ಸಾಕಾರದ ನಿಟ್ಟಿನಲ್ಲಿ ನೆಚ್ಚಿನ ಪ್ರಧಾನಿಗಳ ಪರಿಕಲ್ಪನೆಗೆ ಅನುಗುಣವಾಗಿ, ಅವರಿಗೆ ಹೆಗಲಿಗೆ ಹೆಗಲುಕೊಟ್ಟು ಹಗಲಿರುಳು ಶ್ರಮಿಸುತ್ತಿರುವ ಅಮಿತ್ ಶಾ ಜೀ ಅವರ ದೃಢ ನೇತೃತ್ವ ನಮಗೆಲ್ಲರಿಗೂ ಸದಾ ಸ್ಫೂರ್ತಿದಾಯಿಯಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಅಭೂತಪೂರ್ವ ಯಶಸ್ಸು ಕಂಡ BallariChalo ಪಾದಯಾತ್ರೆಯ ಸಂಪೂರ್ಣ ವಿವರಗಳನ್ನು ಇದೇ ಸಂದರ್ಭದಲ್ಲಿ ಅಮಿತ್ ಶಾ ರವರಿಗೆ ಸಲ್ಲಿಸಲಾಯಿತು. ಬಳ್ಳಾರಿ ಯಾತ್ರೆಯುದ್ದಕ್ಕೂ ಅಸಂಖ್ಯಾತ ಕಾರ್ಯಕರ್ತರು ಹಾಗೂ ಸಾರ್ವಜನಿಕರು ತೋರಿದ ಅಭೂತಪೂರ್ವ ಬೆಂಬಲದ ಚಿತ್ರಣವನ್ನು ವಿವರಿಸಲಾಯಿತು. ಬರುವ ದಿನಗಳಲ್ಲಿ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಲು, ನಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಮಾರ್ಗದರ್ಶನ ಪಡೆಯಲಾಯಿತು. ಬಳ್ಳಾರಿ ಚಲೋ ಸೇರಿದಂತೆ ರಾಜ್ಯದಲ್ಲಿ ಪಕ್ಷ ಸಂಘಟನೆಯ ಚಟುವಟಿಗಳ ಕುರಿತು ಅಮಿತ್ ಶಾ ಜೀ ಮೆಚ್ಚುಗೆ ವ್ಯಕ್ತಪಡಿಸಿದರು. 2028ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯ ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಮ್ಮ ಸಂಘಟಿತ ಹೋರಾಟ ಹಾಗು ಜನಜಾಗೃತಿ ಕಾರ್ಯಕ್ರಮಗಳು ಮುಂದುವರೆಯಲಿದೆ.

ಅಮಿತ್ ಶಾ ರವರು ಹಾಗೂ ಪಕ್ಷದ ವರಿಷ್ಠರ ಮಾರ್ಗದರ್ಶನ ಹಾಗು ಬೆಂಬಲವೇ ನಮಗೆ ಶ್ರೀರಕ್ಷೆಯಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!